Advertisement
ಮುಂಬರುವ ಬೆಲ್ಜಿಯಂ ಮತ್ತು ಇಂಗ್ಲೆಂಡ್ ಲೆಗ್‌ನ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಗಾಗಿ ಗುರುವಾರ ಪ್ರಕಟಿಸಲಾದ ತಂಡದಲ್ಲಿ ಈ ಮಹತ್ವದ ಬದಲಾವಣೆ ಸಂಭವಿಸಿದೆ. ಸಲೀಮಾ ಟೇಟೆ ಇತ್ತೀಚೆಗಷ್ಟೇ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು.
Related Articles
Advertisement
ಬೆಲ್ಜಿಯಂ ಆವೃತ್ತಿಯ ಪಂದ್ಯಗಳು ಮೇ 22ರಿಂದ ಮೇ 26ರ ತನಕ; ಇಂಗ್ಲೆಂಡ್ ಆವೃತ್ತಿಯ ಪಂದ್ಯಗಳು ಜೂ. 1ರಿಂದ ಜೂ. 9ರ ತನಕ ನಡೆಯಲಿದೆ. ಲಂಡನ್‌ನಲ್ಲಿ ಆಡಲಾಗುವ ಪಂದ್ಯಗಳಲ್ಲಿ ಗ್ರೇಟ್ ಬ್ರಿಟನ್ ಮತ್ತು ಜರ್ಮನಿ ವಿರುದ್ಧ ಭಾರತ ಸೆಣಸಲಿದೆ. ಸದ್ಯ ಭಾರತ ಎಫ್ಐಎಚ್ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
ಭಾರತ ತಂಡ :
ಗೋಲ್‌ಕೀಪರ್: ಸವಿತಾ ಪುನಿಯಾ, ಬಿಚು ದೇವಿ ಖರಿಬಾಮ್.
ಡಿಫೆಂಡರ್: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ಜ್ಯೋತಿ ಛತ್ರಿ, ಮಹಿಮಾ ಚೌಧರಿ.
ಮಿಡ್ ಫೀಲ್ಡರ್: ಸಲೀಮಾ ಟೇಟೆ (ನಾಯಕಿ), ನವನೀತ್ ಕೌರ್ (ಉಪನಾಯಕಿ), ವೈಷ್ಣವಿ ವಿಠuಲ್ ಫಾಲ್ಕೆ, ನೇಹಾ, ಜ್ಯೋತಿ, ಬಲ್‌ಜೀತ್ ಕೌರ್, ಮನೀಷಾ ಚೌಹಾಣ್, ಲಾಲ್ರೆಮಿÕಯಾಮಿ.
ಫಾರ್ವರ್ಡ್ಸ್: ಮುಮ್ತಾಜ್ ಖಾನ್, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ಪ್ರೀತಿ ದುಬೆ, ವಂದನಾ ಕಟಾರಿಯಾ, ಸುನೇಲಿಟಾ ಟೋಪೊ, ದೀಪಿಕಾ ಸೊರೆಂಗ್.