Advertisement

ಬಿಜೆಪಿ, ಜೆಡಿಎಸ್‌ನಿಂದಲೇ ಸಲೀಂಗೆ ಸುಪಾರಿ: ಲಕ್ಷ್ಮಣ್‌

05:39 PM Oct 18, 2021 | Team Udayavani |

ಮೈಸೂರು: ಬಿಜೆಪಿ-ಜೆಡಿಎಸ್‌ ಸೇರಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಹಾಕುವ ಸಲುವಾಗಿ ಸುಪಾರಿ ಕೊಟ್ಟು ಸಲೀಂ ಕೈಯಲ್ಲಿ ಮಾತನಾಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

Advertisement

ಆತಂರಿಕ ತನಿಖೆ: ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಎರಡೂ ಪಕ್ಷಗಳಿಂದ ಸುಪಾರಿ ಪಡೆದು ಸಲೀಂ ಮಾತನಾಡಿರಬಹುದು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ವಿರುದ್ಧ ಕಂದಕ ಸೃಷ್ಟಿಸಲು ಬಿಜೆಪಿ ಯತಿ °ಸುತ್ತಿದ್ದು, ಕೆಪಿಸಿಸಿಯಿಂದ ಆಂತರಿಕ ತನಿಖೆ ನಡೆಯಲಿದೆ ಎಂದರು.

ಮರೆಯಬಾರದು: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಹೆಚ್ಚಿರುವ ಬೆಲೆ ಏರಿಕೆ, ಸರ್ಕಾರದ ವೈಫ‌ಲ್ಯ, ಕೇಂದ್ರದ ಕೃಷಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಗ್ಗೆ ಮಾತನಾಡದೇ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಿ ಮುಖ್ಯ ವಿಷಯ ಮರೆಮಾಚಲು ಯತ್ನಿಸಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಕಂಡಿದ್ದು ಕುಮಾರಸ್ವಾಮಿ ಅವರಿಂದಲೇ ಎಂಬುದನ್ನು ಯಾರೂ ಮರೆಯ ಬಾರದು ಎಂದು ಹೇಳಿದರು.

ಪಾಲಿಕೆ ಸದಸ್ಯ ಆರೀಫ್ ಹುಸೇನ್‌ ಮಾತನಾಡಿ, ಸಲೀಂನನ್ನು ಡಿ.ಕೆ.ಶಿವ ಕುಮಾರ್‌ ತಮ್ಮನಂತೆ ಬೆಳೆಸಿದ್ದರು. ಆದರೆ, ಆತ ದ್ರೋಹ ಬಗೆದಿದ್ದರಿಂದ ಇಂತಹ ಮೀರ್‌ ಸಾಧಿಕ್‌ ಪಕ್ಷದಲ್ಲಿ ಇಟ್ಟು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಆತನನ್ನು ಕಿತ್ತು ಹಾಕಿದ್ದೇವೆ.

ಇದನ್ನೂ ಓದಿ:- ಹುಮನಾಬಾದ: ಪರಿಸರ ಹಾನಿ ಮಾಡುತ್ತಿರುವ ಕೈಗಾರಿಕಾ ಕಾರ್ಖಾನೆಗಳು

Advertisement

ಶಾಸಕ ತನ್ವೀರ್‌ ಸೇಠ್‌ ರ ವಿಚಾರದಲ್ಲಿ ಪಾಲಿಕೆ ಒಪ್ಪಂದದಂತೆ ಕಾಂಗ್ರೆಸ್‌ಗೆ ಸಿಗಬೇಕಾದ ಸ್ಥಾನ ಕೊಡಲಿಲ್ಲ. ಇದರಂತೆ ಕಾಂಗ್ರೆಸ್‌ ಕೂಡ ನಡೆದುಕೊಂಡಿತು. ತಪ್ಪು ನಿಮ್ಮಲ್ಲಿ ಇಟ್ಕೊಂಡು ಗೂಬೆ ಕೂರಿಸುವ ಕೆಲಸ ಮಾಡಬೇಡಿ. ನೀವು ಮಾಡಿರುವ ಆರೋಪ ಸಾಬೀತು ಮಾಡಿ. ನಾನು ರಾಜಕಾರಣದಿಂದಲೇ ನಿವೃತ್ತಿ ಪಡೆಯುತ್ತೇನೆ. ಮುಖ್ಯಮಂತ್ರಿ ಯಾಗಿ ಮುಸ್ಲಿಮರಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಪಾಲಿಕೆ ಉಪಮೇಯರ್‌ ಅನ್ವರ್‌ಬೇಗ್‌, ನಗರಪಾಲಿಕೆ ಸದಸ್ಯರಾದ ಪಂಡು, ಆಪ್ಸರ್‌, ಶೌಕತ್‌ ಪಾಷಾ, ಎಂ.ಶಿವಣ್ಣ, ಹ್ಯಾರಿಸ್‌ ಇದ್ದರು.

“ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಮುಸ್ಲಿಮರನ್ನು ವ್ಯವಸ್ಥಿತವಾಗಿ ತುಳಿದು ಈಗ ಸಿದ್ದರಾಮಯ್ಯ ಮೇಲೆ ಆರೋಪ ಮಾಡುತ್ತಿದ್ದು, ಇದನ್ನು ಯಾರೂ ನಂಬುವುದಿಲ್ಲ. ಕುಮಾರಸ್ವಾಮಿ ಅವರು ಗಾಂಜಾ, ಅಫೀಮು, ಚರಸ್‌ ತೆಗೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಸುಳ್ಳು ಕಥೆ ಕಟ್ಟಿ ಆರೋಪ ಮಾಡಬಾರದು.”

ಆರೀಫ್ ಹುಸೇನ್‌, ಪಾಲಿಕೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next