Advertisement
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಯಾವ ಪರ್ಸಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ.ಸಲೀಂ ಮಾತನಾಡಿರುವ ವಿಚಾರ ಕಾಂಗ್ರೆಸ್ ಪಕ್ಷಕ್ಕೂ, ನನಗೂ ಸಂಬಂಧಿಸುವುದಿಲ್ಲ ಎಂದರು.
Related Articles
Advertisement
ಸಿದ್ದರಾಮಯ್ಯ ಅವರ ಜೊತೆ ಜಗಳವೂ ಇಲ್ಲ ಏನೂ ಇಲ್ಲ. ನಾನು ಯಾವುದೇ ಗುಂಪುಗಾರಿಕೆ ನಡೆಸುವವನಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿಲ್ಲ ಎಂದರು.
ನಾನು ಹಳ್ಳಿಯಿಂದ ಬಂದವನು. ನನ್ನ ಬಾಡಿ ಲ್ಯಾಂಗ್ವೇಜ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ನನ್ನದೇ ಆದ ಶೈಲಿ ಇದೆ, ನನ್ನದೇ ಆದ ವ್ಯಕ್ತಿತ್ವ, ನನ್ನದೇ ಆದ ನಡತೆ, ನನ್ನದೇ ಆದ ಯಶಸ್ಸು ಇದೆ ಎಂದರು.
ಬಿಜೆಪಿ ವಿರುದ್ಧವೂ ಅವರದ್ದೇ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಮಾಡಿದ್ದರು,ಪಕ್ಷ ಕ್ರಮ ಕೈಗೊಂಡಿದೆಯೇ ಎಂದು ಸವಾಲು ಹಾಕಿದರು.
ಡಿಕೆಶಿ ಅವರು ಉತ್ತಮ ಆಡಳಿತಗಾರರು
ತೀವ್ರ ವಿವಾದಕ್ಕೆ ಗುರಿಯಾದ ಬಳಿಕ ವಿ. ಎಸ್. ಉಗ್ರಪ್ಪ ಅವರು ಸುದ್ದಿಗೋಷ್ಠಿ ನಡೆಸಿ, ನಡೆದ ಘಟನೆಗೆ ತೇಪೆ ಹಚ್ಚಲು ಪ್ರಯತ್ನಿಸಿದರು.ಡಿ.ಕೆ.ಶಿವಕುಮಾರ್ ಅವರು ಆಸ್ತಿ ಗಳಿಸಿರುವುದು ರಾಜಕಾರಣದಿಂದ ಅಲ್ಲ. ಅವರ ವ್ಯವಹಾರ ಮತ್ತು ಉದ್ಯಮದಿಂದ ಮಾಡಿದ್ದಾರೆ. ರಾಜಕಾರಣದಲ್ಲಿ ಅವರು ವೆಚ್ಚ ಮಾಡಿ ಕಳೆದುಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕಮಿಷನ್ ಪ್ರವೃತ್ತಿ ಬೆಳೆಸಿದವರಲ್ಲ. ಪಿಸುಗುಟ್ಟಿದ ಮಾತನ್ನು ತೆಗೆದುಕೊಂಡು ಕೋಟಿಗಟ್ಟಲೆ ತೆಗೆದುಕೊಂಡಿದ್ದಾರೆ ಎಂದು ಬಿಂಬಿಸುವುದು ಮಾಧ್ಯಮಗಳಿಗೆ ಸಮಂಜಸವಲ್ಲ ಎಂದರು. ಗೂಬೆ ಕೂರಿಸುವುದು ಬೇಡ , ನಾನು ಯಾರಿಗೂ ಗೂಬೆ ಕೂರಿಸುವುದಿಲ್ಲ. ಆಕಸ್ಮಿಕವಾಗಿ ಅವನು ಕಿವಿಯಲ್ಲಿ ಪಿಸುಗುಟ್ಟಿದ್ದನ್ನು ಪರಿಗಣಿಸಬೇಡಿ ಎಂದರು. ಕಮಿಷನ್, ಭ್ರಷ್ಟಾಚಾರ ಕಾಂಗ್ರೆಸ್ ಗೆ ದೂರ. ಭ್ರಷ್ಟಾಚಾರದ ಗಂಗೋತ್ರಿ ಹರಿಸುತ್ತಿದ್ದರೇ ಅದು ಬಿಜೆಪಿಯವರು ಎಂದರು.