Advertisement

ಸಾಲಿಗ್ರಾಮ: ಸರ್ವಿಸ್‌ ರಸ್ತೆಗೆ ಆಗ್ರಹಿಸಿ ಸಭೆ

09:18 PM Jul 07, 2019 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಕಾರ್ಕಡ ರಸ್ತೆಯಿಂದ, ಮೀನು ಮಾರುಕಟ್ಟೆ ತನಕ ಚತುಷ್ಪಥ ರಸ್ತೆಯ ಎರಡು ಕಡೆಗಳಲ್ಲಿ ಸುಮಾರು 800ಮೀ. ಸರ್ವಿಸ್‌ ರಸ್ತೆ ನಿರ್ಮಿಸಲು ಯೋಜನೆಯ ಪ್ರಥಮ ಹಂತದಲ್ಲಿ ಅನುಮೋದನೆ ದೊರೆತಿದ್ದು ಇದುವರೆಗೆ ಸರ್ವಿಸ್‌ ರಸ್ತೆಯನ್ನು ನಿರ್ಮಿಸಿಲ್ಲ. ಈ ಕುರಿತು ಸಾರ್ವಜನಿಕ ಹೋರಾಟ ನಡೆಸುವ ಕುರಿತು ಚರ್ಚಿಸಲು ಜು.7ರಂದು ಸಾಲಿಗ್ರಾಮ ಗುರುನರಸಿಂಹ ದೇಗುದ ಜ್ಞಾನಮಂದಿರದಲ್ಲಿ ಸಭೆ ನಡೆಯಿತು.


Advertisement

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಸಾಸ್ತಾನ ಪ್ರತಾಪ್‌ ಶೆಟ್ಟಿ ಮಾತನಾಡಿ, ಸರ್ವಿಸ್‌ ರಸ್ತೆ ನಿರ್ಮಾಣವಾಗಬೇಕಾದರೆ ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಸಂಘಟಿತರಾಗಿ ನವಯುಗ ವಿರುದ್ಧ ಪ್ರತಿಭಟಿಸಬೇಕಾದ ಅನಿವಾರ್ಯತೆ ಇದೆ. ನಿಮ್ಮ ಹೋರಾಟಕ್ಕೆ ಜಾಗೃತಿ ಸಮಿತಿ ಬೆಂಬಲವಾಗಿ ನಿಲ್ಲಲಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಹೋರಾಟ ನಡೆಸುವ ಕುರಿತು ಸಹಮತ ವ್ಯಕ್ತಪಡಿಸಿದರು ಹಾಗೂ ಬೆಂಬಲ ನೀಡುವುದಾಗಿ ಘೋಷಿಸಿದರು.

ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್‌ ಕಾವೇರಿ ಹಾಗೂ ಪತ್ರಕರ್ತ ಚಂದ್ರಶೇಖರ ಬೀಜಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೋರಾಟ ಸಮಿತಿ ರಚನೆ
ಸರ್ವಿಸ್‌ ರಸ್ತೆಯ ಸಲುವಾಗಿ ಹೋರಾಟ ಸಮಿತಿ ರಚಿಸಲಾಯಿತು ಹಾಗೂ ಅಧ್ಯಕ್ಷರಾಗಿ ಶ್ಯಾಮಸುಂದರ ನಾೖರಿ ಮತ್ತು ಕಾರ್ಯದರ್ಶಿಯಾಗಿ ನಾಗರಾಜ ಗಾಣಿಗ, ಸಂಚಾಲಕರಾಗಿ ಅಚ್ಯುತ್‌ ಪೂಜಾರಿ ಹಾಗೂ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಿತು.ಜಾಗೃತಿ ಸಮಿತಿ ಕಾರ್ಯದರ್ಶಿ ವಿಟuಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next