Advertisement

ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್ ಸಮಾವೇಶ

09:43 AM Nov 13, 2019 | sudhir |

ಕೊಟ: ಯಕ್ಷಗಾನ ಕಲಾವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ ನ.12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಯಕ್ಷಗಾನ ಕಲಾವಿದರ ಸಮಾವೇಶ ನಡೆಯಿತು.

Advertisement

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಜುರಾಯಿ ಇಲಾಖೆಯ ಯಕ್ಷಗಾನ ಮೇಳಗಳ ಕಲಾವಿದರಿಗೆ ಸರಕಾರದ ಸೌಲಭ್ಯ ನೀಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಮುಜರಾಯಿ ಹೊರತುಪಡಿಸಿದ ಕಲಾವಿದರಿಗೂ ಅನುಕೂಲವಾಗಬೇಕು ಎನ್ನುವ ನಿಲುವು ನಮ್ಮ ಸರಕಾರದ್ದು. ಹೀಗಾಗಿ ಕಲಾವಿದರ ಸ್ಥಿತಿಗತಿ, ಸಂಕಷ್ಟವನ್ನು ಅಧ್ಯಯನ ಮಾಡುವ ಸಲುವಾಗಿ ತೆಂಕು-ಬಡಗಿನ 6 ಮಂದಿ ತಜ್ಞರನ್ನೊಳಗೊಂಡು ಸಮಿತಿಯನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಇದರ ವರದಿಯನ್ನು ಆಧಾರಿಸಿ ಕಲಾವಿದರ ವೇತನ ಪರಿಷ್ಕರಣೆ, ನಿವೃತ್ತಿ ಭತ್ತೆ, ಇ.ಎಸ್.ಐ., ಪಿ.ಎಫ್ ಹಾಗೂ ಆರೋಗ್ಯ ಮುಂತಾದ ಸೌಲಭ್ಯಗಳನ್ನು ನೀಡುವ ಚಿಂತನೆ ಇದೆ ಹಾಗೂ ಸರಕಾರ ಪರಿಪೂರ್ಣವಾಗಿ ಯಕ್ಷಗಾನ ಕಲಾವಿದರ ಜತೆಗಿದೆ ಎಂದು ತಿಳಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ. ಹೆಗ್ಡೆ ಮಾತನಾಡಿ, ಕಲಾವಿದರ ಸಂಕಷ್ಟ ಅಧ್ಯಯನಕ್ಕೆ ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಆ ಸಮಿತಿಯಲ್ಲಿ ಕಲಾವಿದರ ಪರಧ್ವನಿಯಾಗುವೆ ಎಂದರು.
ಪಟ್ಲಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಕಲಾವಿದ ಐರೋಡಿ ಗೋವಿಂದಪ್ಪ, ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ, ಕೊಂಡದಕುಳಿ ರಾಮಚಂದ್ರ ಹಗ್ಡೆ ಕಲಾವಿದರ ಕುರಿತು ಮಾತನಾಡಿದರು.

ಕಾರ್ಯಕ್ರಮದ ಸಂಘಟಕ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಉಪ್ಪೂರು ಕಲಾವಿದರ ಬೇಡಿಕೆಗಳನ್ನು ವಾಚಿಸಿದರು. ಕೆ.ಪಿ. ಶೇಖರ್ ವಂದಿಸಿದರು.

ಯಕ್ಷಗಾನ ಕಲಾವಿದರ ಹಿತಾಸಕ್ತಿ ಒಕ್ಕೂಟದ ಪ್ರಮುಖರಾದ ರಾಘವೇಂದ್ರ ಮಯ್ಯ, ಸದಾಶಿವ ಅಮೀನ್, ಕೋಡಿ ವಿಶ್ವನಾಥ ಗಾಣಿಗ, ಯಕ್ಷಗಾನ ಅಕಾಡೆಮಿ ಸದಸ್ಯ ಕೆ.ಎಂ.ಶೇಖರ್ ಮುಂತಾದವರು ಸಹಕರಿಸಿದರು.

Advertisement

ಸಮಾವೇಶದ ಬೇಡಿಕೆಗಳು
– ಕಲಾವಿದರನ್ನು ಕಾರ್ಮಿಕರರಾಗಿ ಪರಿಗಣಿಸಬೇಕು.
– ಭದ್ರತೆಗೆ ಅಗತ್ಯವಿರುವ ವಿಮೆ, ಭವಿಷ್ಯನಿ?, ಪಿಂಚಣಿ ಮುಂತಾದ ಸೌಲಭ್ಯ ನೀಡಬೇಕು.
– ಸಮರ್ಪಕ ಮಾಶಾಸನ ಮತ್ತು ಮಾಶಾಸನದ ವಯೋಮಿತಿ ಸಡಿಲಿಕೆ.
– ಯಕ್ಷಗಾನ ಕ್ಷೇತ್ರಕ್ಕೂ 5ಲಕ್ಷ ಮೌಲ್ಯದ ಪ್ರಶಸ್ತಿ ನೀಡಬೇಕು.

ತೆಂಕು-ಬಡಗಿನ 300ಕ್ಕೂ ಹೆಚ್ಚು ಕಲಾವಿದರ ಉಪಸ್ಥಿತಿರಿದ್ದು, ಕಲಾವಿದರ ಸಂಘಟನೆಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಸಮಾವೇಶ ಎನ್ನುವ ಶ್ಲಾಘನೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next