Advertisement

Saligrama ಗುರುನರಸಿಂಹ ಬ್ರಹ್ಮರಥೋತ್ಸವ ಸಂಪನ್ನ

11:44 PM Jan 17, 2024 | Team Udayavani |

ಕೋಟ: ಸಾಲಿಗ್ರಾಮ ಗುರುನರಸಿಂಹ ದೇಗುಲದ ವಾರ್ಷಿಕ ಬ್ರಹ್ಮ ರಥೋತ್ಸವ ಬುಧವಾರ ಜರಗಿತು. ಕೋಟ ಹದಿನಾಲ್ಕುಗ್ರಾಮ ಮತ್ತು ರಾಜ್ಯ, ಹೊರ ರಾಜ್ಯದಲ್ಲಿ ನೆಲೆಸಿರುವ ಗುರುನರಸಿಂಹನ ಸಾವಿರಾರು ಮಂದಿ ಭಕ್ತರು ಭಾಗವಹಿಸಿದರು.

Advertisement

ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಜಾತ್ರೆಗೆ ಆಗಮಿ ಸಿದ ಭಕ್ತರಿಗೆ ಪನಿವಾರ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದರಥಾವರೋಹಣ ಬ್ರಹ್ಮ ರಥೋತ್ಸವ ಸಂದರ್ಭ ತಟ್ಟಿ ರಾಯ, ಬ್ಯಾಂಡ್‌ವಾದನ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಿತು.

ಗುರುನರಸಿಂಹ, ಆಂಜನೇಯ ದೇಗುಲಕ್ಕೆ ವಿಶೇಷ ಹೂವು ಮತ್ತು ವಿದ್ಯುತ್‌ ಅಲಂಕಾರ, ಆಂಜನೇಯ ದೇಗುಲದ ಮುಂಭಾಗಕ್ಕೆ ಆಂಜನೇಯ ಸೇವಾ ಟ್ರಸ್ಟ್ ವತಿಯಿಂದ ವಿಶೇಷ ಹೂವಿನ ಅಲಂಕಾರ, ಕಾರಂತ ಬೀದಿಗೆ ನಾಗರಿಕ ಬಳಗ ವತಿಯಿಂದ ದಾನಿಗಳ ಸಹಕಾರದಲ್ಲಿ ವಿದ್ಯುತ್‌ ದೀಪಾಲಂಕಾರ ಕಣ್ಮನ ಸೆಳೆಯಿತು. ರಾತ್ರಿ ಕಟ್ಟೆಪೂಜೆ ನೆರವೇರಿತು.

ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಕೆ.ಎಸ್‌. ಕಾರಂತ, ಉಪಾಧ್ಯಕ್ಷ ವೇ|ಮೂ| ಗಣೇಶ ಮೂರ್ತಿ ನಾವಡ, ಕಾರ್ಯದರ್ಶಿ ಪಿ. ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ವೇ|ಮೂ| ಪರಶುರಾಮ ಭಟ್‌, ಆಡಳಿತ ಮಂಡಳಿ ಸದಸ್ಯರಾದ ಬೆಂಗಳೂರಿನ ಎ.ವಿ. ಶ್ರೀಧರ ಕಾರಂತ, ಪಿ. ಸದಾಶಿವ ಐತಾಳ ಮಂಗಳೂರು- ಕಾಟಿಪಳ್ಳ, ಶ್ರೀಧರ ರಾಯ ಕೇರಳ ಮೀಯಪದವು, ಗುಂಡ್ಮಿ ವೇ|ಮೂ| ಚಂದ್ರಶೇಖರ ಉಪಾಧ್ಯ ಮತ್ತು ಕೋಟ ಅನಂತಪದ್ಮನಾಭ ಐತಾಳ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next