ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ಮನ್ಮಹಾರಥೋತ್ಸದ ಅಂಗವಾಗಿ ದೇವಸ್ಥಾನ ಸೇರಿದಂತೆ ನಗರದ ಸುತ್ತಮುತ್ತ ಪ್ರದೇಶವನ್ನು ಪತಾಕೆ ಮತ್ತು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ.
Advertisement
ಸ್ವಯಂ ಸೇವಕರೂ ಸೇರಿದಂತೆ ಆಡಳಿತ ಸಮಿತಿ ರಸ್ತೆಗಳ ಇಕ್ಕೆಲಗಳಲ್ಲೂ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಹಾಕಿದ್ದು ವಡಭಾಂಡೇಶ್ವರ ಅಕ್ಷರಶಃ ಮದುವಣಗಿತ್ತಿಯಂತೆ ಕಾಣುತ್ತಿದೆ. ಈಗಾಗಲೇ ದೇಗಲದ ಬ್ರಹ್ಮಕಲಶೋತ್ಸವ ಸಿದ್ಧತೆಗಳು ಬಹುತೇಕ ಎಲ್ಲ ಪೂರ್ಣಗೊಂಡಿವೆ.
Related Articles
ಮಾ. 19ರಂದು ಸಂಜೆ 4ರಿಂದ ಹಸುರು ಹೊರೆ ಕಾಣಿಕೆ ಮೆರವಣಿಗೆಯು ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ 101 ಚೆಂಡೆ ಸೇರಿದಂತೆ ವಿವಿಧ ವೇಷಭೂಷಣದೊಂದಿಗೆ ವೈಭವದ ಶೋಭಾಯಾತ್ರೆಯಲ್ಲಿ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಸಾಗಿ ಬರಲಿದೆ. ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಸಂಜೀವಿನಿ ಮೃತ್ಯುಂಜಯ ಹೋಮ, ಸಂಜೆ ವಾಸ್ತು ಹೋಮಾದಿ ಸೇರಿದಂತೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿದೆ. ಮಾ. 19ರಿಂದ ಮಾ. 29ರ ವರೆಗೆ ಬೆಳಗ್ಗೆ ಮತ್ತು ಸಂಜೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಲಿರುವುದು.
Advertisement
ಸಾಂಸ್ಕೃತಿಕ ಕಾರ್ಯಕ್ರಮಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ. 19ರಂದು ರಾತ್ರಿ 8ರಿಂದ ವಿದುಷಿ ಸುನೀತ ಗಿರೀಶ್ ಕೆದ್ಲಾಯ ಅವರಿಂದ ವೀಣಾ ವಾದನ, ಮಂದಾರ್ತಿ ಸಮರ್ಪಣ ಮತ್ತು ತಂಡದವರಿಂದ ಭರತನಾಟ್ಯ, 20ರಂದು ವಿದುಷಿ ಸಹನಾ ಕೃಷ್ಣರಾಜ್ ಭಟ್ ಮತ್ತು ಬಳಗ, ವಿದುಷಿ ಶರ್ಮಿಳಾ ರಾವ್ ಮತ್ತು ಶಿಷ್ಯವೃಂದದವರಿಂದ ವಯಲಿನ್ ವಾದನ ನಡೆಯಲಿದೆ. 21 ರಂದು ರಾತ್ರಿ ಬನ್ನಂಜೆ ಶ್ರೀಧರ್ ರಾವ್ ಬಳಗದವರಿಂದ ಭರತನಾಟ್ಯ, 22ರಂದು ತೊಟ್ಟಂ ಗಜಾನನ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ವಡಭಾಂಡೇಶ್ವರ ಕ್ಷೇತ್ರ ಮಹಾತ್ಮೆ ಯಕ್ಷಗಾನ, 23ರಂದು ಸುಮನಸಾ ಕೊಡವೂರು ತಂಡದವರಿಂದ ಶಿಕಾರಿ ತುಳು ನಾಟಕ, 24ರಂದು ನವಸುಮ ರಂಗಮಂಚ ಕೊಡವೂರು ತಂಡದಿಂದ ಗಿಡ್ಡಿ ತುಳು ನಾಟಕ, 25ರಂದು ಸೃಷ್ಟಿ ನೃತ್ಯಕಲಾ ಕುಟೀರ ಉಡುಪಿ ತಂಡದವರಿಂದ ಶ್ರೀ ಕೃಷ್ಣ ಸಂದರ್ಶನಂ ನೃತ್ಯರೂಪಕ, 26ರಂದು ಸ್ಥಳಿಯರಿಂದ ವಿವಿಧ ವಿನೋದಾವಳಿ ನಡೆಯಲಿರುವುದು.