Advertisement
ವಾಹನಗಳ ಸಂಚಾರ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿರುವ ಕುರಿತು ದೂರುಗಳು ಕೇಳಿಬಂದ ಮೇರೆಗೆ ಸ್ಥಳೀಯಾಡಳಿತ ನೆರವಿನೊಂದಿಗೆ ಕೋಟ ಪೊಲೀಸರು ಕಾರಂತಬೀದಿಯ ಎರಡು ಕಡೆ ಹಾಗೂ ಆಂಜನೇಯ ದೇವಸ್ಥಾನದ ಎದುರು ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ಒಳಪ್ರವೇಶಿಸದಂತೆ ನಿರ್ಬಂಧಿಸಿದರು. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಅನವಶ್ಯವಾಗಿ ಪೇಟೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಯಿತು.ಹೀಗಾಗಿ ಬೆಳಗ್ಗೆ 11ರ ಅನಂತರ ಮುಖ್ಯಪೇಟೆ ಸಂಪೂರ್ಣ ಬಿಕೋ ಎನ್ನುತಿತ್ತು.