ಕೋಟ: ಸಾಲಿಗ್ರಾಮ ಪಾರಂಪಳ್ಳಿಯ ಪ್ರಗತಿಪರ ಕೃಷಿಕ ರಘು ಮಧ್ಯಸ್ಥ ಅವರು ಒಂದು ಎಕರೆ ಜಾಗದಲ್ಲಿ 9 ಟನ್‌ನಷ್ಟು ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರಾಟ ನಡೆಸುವುದು ಸಮಸ್ಯೆಯಾಗಿತ್ತು.
ಉದಯವಾಣಿಯಲ್ಲಿ ಪ್ರಕಟವಾಗುತ್ತಿದ್ದ ರೈತಸೇತು ಅಂಕಣ ಗಮನಿಸಿ ಅದಕ್ಕೆ ಬೇಕಾದ ಮಾಹಿತಿಯನ್ನು ಕಳುಹಿಸಿ ದ್ದರು. ಅದು ರವಿವಾರ ಪ್ರಕಟವಾಗಿದ್ದು, ಅದೇ ದಿನ ಎಲ್ಲವೂ ಮಾರಾಟವಾಗಿದೆ.
ಬೆಳಗ್ಗೆಯಿಂದಲೇ ಸಾಕಷ್ಟು ಕರೆಗಳು ಬಂದಿದ್ದು, ನಾಲ್ಕೈದು ಗಂಟೆಗಳಲ್ಲಿ ಗದ್ದೆಯ ಲ್ಲಿಯೇ ಎಲ್ಲ 9 ಟನ್ ಕಲ್ಲಂಗಡಿ ಹಣ್ಣು ಮಾರಾಟವಾದವು. ಮಧ್ಯಾಹ್ನ 12 ಗಂಟೆ ಬಳಿಕ ಬಂದವರಿಗೆ ಹಣ್ಣೇ ಇರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿರುವ ಇವರು ಪ್ರತಿ ವರ್ಷ ದಲ್ಲಾಳಿಗಳ ಮೂಲಕ ಕಡಿಮೆ ದರದಲ್ಲಿ (ಕೆ.ಜಿ.ಗೆ 10 ರೂ.)
ಮಾರಾಟ ಮಾಡುತ್ತಿದ್ದರು. ಈ ಬಾರಿ ನೇರ ಮಾರಾಟದ ಪ್ರಯತ್ನ ನಡೆಸಿ ಕೆ.ಜಿ.ಗೆ 12 ರೂ.ಗಳಂತೆ ಮಾರಾಟ ನಡೆಸಿದ್ದಾರೆ.
ಖುಷಿಯಾಗಿದೆ
ಲಾಕ್‌ಡೌನ್ ಮುಂತಾದ ಕಾರಣಗಳಿಂದ ಈ ಬಾರಿಯ ಕಲ್ಲಂಗಡಿ ಬೆಳೆ ಕೈಸುಡಲಿದೆ ಎಂದು ಭಾವಿಸಿದ್ದೆ. ರೈತ ಸೇತು ಅಂಕಣದಲ್ಲಿ ಪ್ರಕಟವಾದ ಬಳಿಕ ಅಚ್ಚರಿಯ ರೀತಿಯಲ್ಲಿ ಮಾರಾಟವಾಗಿದ್ದು ತುಂಬಾ ಖುಷಿಯಾಗಿದೆ. ವಿವರ ಪ್ರಕಟಿಸಿದ ಉದಯವಾಣಿಗೂ ಧನ್ಯವಾದಗಳು.
-ರಘು ಮಧ್ಯಸ್ಥ ಪಾರಂಪಳ್ಳಿ,
ಕಲ್ಲಂಗಡಿ ಬೆಳೆಗಾರ