Advertisement

ಕೋಮುವಾದಿಗಳು ಷಡ್ಯಂತ್ರ ಮಾಡುತ್ತಿದ್ದಾರೆ: ಹಿಜಾಜ್ ವಿಚಾರಕ್ಕೆ ಸಲೀಂ ಅಹ್ಮದ್

03:01 PM Feb 05, 2022 | keerthan |

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಕೋಮುವಾದಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಘಟನೆ ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕು. ಕಾಲೇಜಿನಲ್ಲಿ ಬೇರೆ ವಾತಾವರಣ ಶುರುವಾಗಿದೆ. ಬೇರೆಯವರು ಷಡ್ಯಂತ್ರಗಳನ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಬದ್ಧವಿದೆ. ನನಗೆ, ನಲಪಾಡ್ ಗೆ, ಯು.ಟಿ.ಖಾದರ್ ಗೆ ಅವಕಾಶ ಕೊಟ್ಟಿದೆ. ರೆಹಮಾನ್ ಖಾನ್ ಗೂ ಅವಕಾಶ ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ನಿಂದ ಅನ್ಯಾಯವಾಗಿಲ್ಲ ಎಂದರು.

ಸಿಎಂ ಇಬ್ರಾಹಿಂ ಒಬ್ಬ ಹಿರಿಯ ನಾಯಕರು. 2013 ರಲ್ಲಿ ಸಕ್ರಿಯ ಶಾಸಕನ ಬದಲಿಗೆ ಅವರಿಗೆ ಸೀಟು ಕೊಡಲಾಗಿತ್ತು. ಅಲ್ಲಿ ಅವರು ಸೋತರು. ಆದರೂ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡಲಾಗಿತ್ತು. ನಂತರ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ನಾನೇ ಅವರನ್ನ ರಂದೀಪ್ ಸುರ್ಜೇವಾಲಾ ಅವರ ಭೇಟಿ ಮಾಡಿಸಿದ್ದೆ. ಎಸ್.ಆರ್.ಪಾಟೀಲ್ ರನ್ನು ತೆಗೆಯಲು ಅವರೇ ಹೇಳಿದ್ದರು. ಅವರನ್ನ ತೆಗೆದು ನನ್ನನ್ನ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಆಗ ಎಸ್.ಆರ್.ಪಾಟೀಲ್ ಮೇಲ್ಮನೆ ಪ್ರತಿಪಕ್ಷನಾಯಕರಾಗಿದ್ದರು. ಹಾಗೆಲ್ಲಾ ಮಾಡಲಾಗುವುದಿಲ್ಲ ಎಂದು ಸುರ್ಜೇವಾಲಾ ಹೇಳಿದ್ದರು. ಇಬ್ರಾಹಿಂಗೆ ಪ್ರಚಾರಕ್ಕೆ ಕರೆದಿದ್ದೆವು. ಅವರು ಪ್ರಚಾರಕ್ಕೂ ಬರಲಿಲ್ಲ. ಅವರು ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ಕಣ್ಣಿಟ್ಟದರು. ಪಕ್ಷ ಸಂಘಟನೆ ಮಾಡಿದ ಹರಿಪ್ರಸಾದ್ ಗೆ ಕೊಡಲಾಗಿದೆ. ಅವರು ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆಂದು ನಮಗೆ ಈಗಲೂ ವಿಶ್ವಾಸವಿದೆ ಎಂದು ಸಲೀಂ ಅಹ್ಮದ್ ಹೇಳಿದರು.

ಇದನ್ನೂ ಓದಿ:ವಿಧಾನಸಭೆಗೆ ಹಿಜಾಬ್ ಧರಿಸಿಯೇ ಹೋಗುತ್ತೇನೆ, ಧೈರ್ಯವಿದ್ದರೆ ತಡೆಯಲಿ:ಕಾಂಗ್ರೆಸ್ ಶಾಸಕಿ ಸವಾಲು

ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತದೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಒಪ್ಪಿದ್ದಾರೆ. ಬಿಜೆಪಿ ವಿರುದ್ಧ ಭ್ರಮನಿರಸನರಾಗಿದ್ದಾರೆ. ನಾವು ಸರ್ಕಾರದ ಭ್ರಷ್ಟಾಚಾರ ತೋರಿಸುತ್ತಿದ್ದೇವೆ. ಅದಕ್ಕೆ ಜನ ಹಾನಗಲ್ ಗೆಲುವು ಕೊಟ್ಟರು. ಪರಿಷತ್ ಚುನಾವಣೆಯಲ್ಲಿ ‌ಗೆಲ್ಲಿಸಿದರು. 135 ವರ್ಷಗಳ ಇತಿಹಾಸ ಪಕ್ಷಕ್ಕಿದೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ‌ಬರಲಿದೆ ಎಂದು ಸಲೀಂ ಅಹ್ಮದ್ ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next