Advertisement
ಹೊಸದಿಲ್ಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ನಾಗರಿಕರಿಗೆ ದೀಪಾವಳಿ ಕೊಡುಗೆಯಾಗಿ ಸಬ್ಸಿಡಿ ಬೆಲೆಯಲ್ಲಿ ಗೋಧಿ ಹಿಟ್ಟು ಮಾರಾಟಕ್ಕೆ ಕೇಂದ್ರ ಸರ ಕಾರ ನಿರ್ಧರಿಸಿದೆ. “ಭಾರತ್ ಅಟ್ಟಾ’ ಹೆಸರಿನಲ್ಲಿ ಪ್ರತೀ ಕೆ.ಜಿ.ಗೆ 27.50 ರೂ. ನಂತೆ ಮಾರಾಟ ಮಾಡಲಿದೆ.ದೇಶಾದ್ಯಂತ ಎಸ್‌ಸಿಸಿಎಫ್, ಎನ್‌ಎಎಫ್ಇಡಿ ಮತ್ತು ಕೇಂದ್ರೀಯ ಭಂಡಾರದ 800 ಮೊಬೈಲ್ ವ್ಯಾನ್‌ಗಳು ಹಾಗೂ 2,000ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳ ಮೂಲಕ ಸಬ್ಸಿಡಿ ಬೆಲೆಯಲ್ಲಿ “ಭಾರತ್ ಅಟ್ಟಾ’ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಪ್ರದೇಶಗಳ ಆಧಾರದಲ್ಲಿ ಕೆ.ಜಿ. ಗೋಧಿ ಹಿಟ್ಟಿಗೆ 36ರಿಂದ 70 ರೂ.ವರೆಗೆ ಬೆಲೆ ಇದೆ. ಫೆಬ್ರವರಿಯಲ್ಲೂ ಕೂಡ ಬೆಲೆ ಸ್ಥಿರ ನಿಧಿ ಯೋಜನೆಯಡಿ ಪ್ರತೀ ಕೆ.ಜಿ.ಗೆ 29.50 ರೂ.ಗಳಂತೆ 18,000 ಟನ್ “ಭಾರತ್ ಅಟ್ಟಾ’ ಗೋಧಿ ಹಿಟ್ಟನ್ನು ಕೇಂದ್ರ ಸರಕಾರ ಮಾರಾಟ ಮಾಡಿತ್ತು.