Advertisement

Ullal ಎಂಡಿಎಂಎ ಮಾರಾಟ; ಇಬ್ಬರ ಸೆರೆ

09:35 PM Sep 16, 2023 | Team Udayavani |

ಉಳ್ಳಾಲ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತದ್ದ ಕೇರಳದ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ತಲಪಾಡಿ ತಚ್ಚಾಣಿ ಬಳಿ ಬಂಧಿಸಿದ್ದು ಆವರಿಂದ ಎಂಡಿಎಂಎ ಹಾಗೂ ಸಾಗಾಟಕ್ಕೆ ಬಳಸಿದ್ದ ಬೈಕ್‌ ಮತ್ತು ಮೊಬೈಲ್‌ಗ‌ಳನ್ನು ಪಿಎಸ್‌ಐ ಧನರಾಜ್‌ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಬಂಧಿತ ಆರೋಪಿಗಳನ್ನು ತ್ರಿಶ್ಶೂರ್‌ನ ವಡಕಂಚೇರಿ ಗ್ರಾಮದ ಶೇಕ್‌ ತನ್ವೀರ್‌ (20) ಮತ್ತು ಕೋಯಿಕ್ಕೋಡ್‌ ಅಂಜೇರಿ ವಡಗೆರೆ ನಿವಾಸಿ ಸಾಯಿಕೃಷ್ಣ (19) ಎಂದು ಗುರುತಿಸಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಆನ್ವಯ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next