Advertisement

ಗಾಂಜಾ ಮಾರಾಟ;ನಾಲ್ವರಬಂಧನ-2 ಕೆಜಿ ಗಾಂಜಾ ವಶ

04:29 PM Dec 22, 2018 | Team Udayavani |

ದಾವಣಗೆರೆ: ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಶುಕ್ರವಾರ ಬಂಧಿಸಿರುವ ಸಿಇಎನ್‌ ವಿಭಾಗದ ಪೊಲೀಸರು, ಆರೋಪಿಗಳಿಂದ 15 ಸಾವಿರ ಮೌಲ್ಯದ 2 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

Advertisement

ಹಿರೇಕೇರೂರು ತಾಲೂಕಿನ ಬುಳ್ಳಾಪುರದ ಶಿವಪ್ಪ (70), ದಾವಣಗೆರೆಯ ಮುದ್ದಾಭೋವಿ ಕಾಲೋನಿಯ ಸೈಯದ್‌ ಚಾಂದ್‌ಪೀರ್‌ (27), ಎಸ್‌ಎಸ್‌ಎಂ ನಗರದ ಬಿ. ಯಾಸಿನ್‌ (62) ಹಾಗೂ ಆಜಾದ್‌ ನಗರದ ಬಿ. ಮೆಹಬೂಬಿ (55) ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿತರಾಗಿದ್ದಾರೆ. 

ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಿಗಳು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಈ ಹಿಂದೆಯೂ ನಗರದ ವಿವಿಧ ಠಾಣೆಗಳಲ್ಲಿ ಗಾಂಜಾ ಮಾರಾಟ ಪ್ರಕರಣಗಳು ದಾಖಲಾಗಿದೆ. ಡಿಸಿಬಿ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಟಿ.ವಿ. ದೇವರಾಜ್‌ ನೇತೃತ್ವದ ತಂಡ ಆರೋಪಿಗಳನ್ನು ಗಾಂಜಾ ಸಮೇತ ಬಂಧಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next