Advertisement
ಇಲ್ಲಿನ ಕೆಲವು ಇಲಾಖೆಯ ಅಧಿಕಾರಿ ವರ್ಗಕ್ಕೆ ಮಾರ್ಚ್ನಿಂದ ಇಲ್ಲಿಯವರೆಗೆ ವೇತನ ಸಿಕ್ಕಿಲ್ಲ; ವಿಚಾರಿಸಿದರೆ ಹೊಸ ತಾಲೂಕಿನಲ್ಲಿ “ಖಜಾನೆ 2′ ಇಲ್ಲದೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ. ಕರಾವಳಿ ಜಿಲ್ಲೆಯಲ್ಲಿ “ಉಳ್ಳಾಲ’ ಸಹಿತ ಇತರ ಜಿಲ್ಲೆಯ 3 ಹೊಸ ತಾಲೂಕಿನಲ್ಲಿ ಈ ಸಮಸ್ಯೆ ಉಂಟಾಗಿದೆ.
ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಿಂದ ವಿಭಜನೆಗೊಂಡು ಹೊಸದಾಗಿ ಉಳ್ಳಾಲ ತಾಲೂಕು ರಚನೆಯಾಗಿದೆ. ರಾಜ್ಯ ಹಣಕಾಸು ಇಲಾಖೆಯಿಂದ ಖಜಾನೆ 2 (ಕೆ 2) ಎಂಬ ಸಾಪ್ಟ್ವೇರ್ ಮಾಡಲಾಗಿದೆ. 5 ವರ್ಷದಿಂದಲೂ ಅದು ಚಾಲ್ತಿಯಲ್ಲಿದೆ. ಅದರ ಮೂಲಕವೇ ಇಲಾಖಾ ಸ್ತರದ ಅಧಿಕಾರಿಗಳಿಗೆ ವೇತ ನ ಬರುತ್ತಿತ್ತು. ಉಳ್ಳಾಲ ತಾಲೂಕು 26/8/2022ಕ್ಕೆ ರಚನೆಯಾಗಿದೆ. ಅಲ್ಲಿಂದ ವೇತ ನ ಹಳೆಯ ತಾಲೂಕಿನಲ್ಲಿಯೇ (ಮಂಗಳೂರು-ಬಂಟ್ವಾಳ) ಆಗುತ್ತಿತ್ತು. ಹೊಸ ಆರ್ಥಿಕ ವರ್ಷದಿಂದ ಹೊಸ ತಾಲೂಕಿನ ಖಜಾನೆ ಮುಖೇನವೇ ವೇತ ನ ಬರಬೇಕಾಗಿತ್ತು. ಆದರೆ ಹೊಸ ತಾಲೂಕಿನ ಖಜಾನೆ 2 ರಚನೆ ಇನ್ನೂ ಆಗದೆ ವೇತ ನ ಹಂಚಿಕೆಗೆ ಸಮಸ್ಯೆ ಎದುರಾಗಿದೆ.
Related Articles
Advertisement
ಹಿಂದಿನ ತಾಲೂಕಿನಲ್ಲೇ ವೇತನ?ಮಂಗಳೂರು ತಾಲೂಕಿನ 10 ಗ್ರಾ.ಪಂ. ಹಾಗೂ ಬಂಟ್ವಾಳ ತಾಲೂಕಿನ 7 ಪಂಚಾಯತ್ ವ್ಯಾಪ್ತಿ ಸೇರಿ ಉಳ್ಳಾಲ ತಾಲೂಕು ರಚನೆಯಾಗಿದೆ. ಈ ಪೈಕಿ ಮುಖ್ಯವಾಗಿ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖಾ ಅಧಿಕಾರಿ-ಸಿಬಂದಿ ವೇತನಕ್ಕೆ ತೊಡಕಾಗಿತ್ತು. ಆದರೆ ಉನ್ನತ ಮಟ್ಟದ ಅಧಿಕಾರಿಗಳ ಮಾತುಕತೆ ಮೂಲಕ ಶಿಕ್ಷಣ ಇಲಾಖೆ, ಪಶುಸಂಗೋಪನಾ ಇಲಾಖೆಯವರ ವೇತ ನವನ್ನು ಈ ಹಿಂದಿನ ತಾಲೂಕಿನಲ್ಲಿ ಪಡೆಯಲು ಒಂದೆರಡು ದಿನದ ಹಿಂದೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯವರಿಗೆ ಅನುಮತಿ ಸಿಕ್ಕಿಲ್ಲ. ಖಜಾನೆ ಹೊಸದಾಗಿ ಆಗುವವರೆಗೂ ಈ ಸಮಸ್ಯೆ ಎದುರಾಗುವ ಕಾರಣದಿಂದ ಅಲ್ಲಿಯವರೆಗೆ ಹಳೆ ತಾಲೂಕಿನಲ್ಲಿಯೇ ವೇತ ನ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ರಾಜ್ಯ ಮಟ್ಟಕ್ಕೆ ಮನವಿ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆಯಲ್ಲಿ ಇದು ಪರಿಶೀಲನೆಯಲ್ಲಿ ಬಾಕಿಯಾಗಿದೆ! ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನ
ಉಳ್ಳಾಲ ತಾಲೂಕಿನ ಇಲಾಖೆಯ ಕೆಲವು ಅಧಿಕಾರಿ-ಸಿಬಂದಿಗೆ ವೇತ ನ ಸಿಗುವಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಈಗ ಗಮನಕ್ಕೆ ಬಂದಿದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗುವುದು.
– ಯು.ಟಿ. ಖಾದರ್, ಶಾಸಕರು, -ದಿನೇಶ್ ಇರಾ