Advertisement
ಭಾರತೀಯರ ಹೆಮ್ಮೆಯ ಭಾರತ್ ಸಂಚಾರ ನಿಗಮ ಲಿಮಿಟೆಡ್, (ಬಿಎಸ್‌ಎನ್‌ಎಲ್) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ತಿಂಗಳಿಂದ ಸಂಬಂಳವಿಲ್ಲದೇ 1,75,000 ಉದ್ಯೋಗಿಗಳು ಕಂಗಾಲಾಗಿದ್ದಾರೆ. ಇದರ ಮಧ್ಯೆ ಮಾರ್ಚ್ ತಿಂಗಳ ಸಂಬಳವೂ ವಿಳಂಬವಾಗಬಹುದೆನ್ನುವ ಮಾತು ಕೇಳಿಬರುತ್ತಿದೆ. ಸರ್ಕಾರ, ಯಾವುದೇ ಹಣಕಾಸು ಸಹಾಯ ನೀಡದಿರುವುದರಿಂದ, ಸಂಸ್ಥೆಯು ಗಳಿಸುವ ಆದಾಯದ ಮೇಲೇ ಸಂಬಳ ನೀಡಿಕೆಯ ಸಾಧ್ಯತೆ ಅವಲಂಭಿತವಾಗಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.
Related Articles
ಭಾರತದಲ್ಲಿ ಪ್ರತಿಯೊಂದು ಸಾರ್ವಜನಿಕ ಉದ್ಯಮದಲ್ಲಿರುವ ಸಂಕಷ್ಟಗಳನ್ನೇ ಬಿಎಸ್‌ಎನ್‌ಎಲ್ ಕೂಡ ಅನುಭವಿಸುತ್ತಿರುವುದು. ಇದರ ಪರಿಸ್ಥಿತಿಯನ್ನು ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಹೋಲಿಸಬಹುದು. ಬಿಎಸ್‌ಎನ್‌ಎಲ್ ಕಾರ್ಮಿಕ ಸಂಘಗಳ ಪ್ರಕಾರ, ಈ ಸಂಸ್ಥೆಯ ಇಂದಿನ ಹತಾಶ ಸ್ಥಿತಿಗೆ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಬಿಳಿ ಆನೆಯಾಗಿ ತೋರಿಸಿ, ನಂತರ ಮುಚ್ಚಬೇಕು ಎನ್ನುವ ಸರ್ಕಾರದ ಗೌಪ್ಯಕಾರ್ಯ ಸೂಚಿಯೇ ಕಾರಣ. ಈ ಸಂಸ್ಥೆ ಬಗೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹೆಚ್ಚಿದೆ. ಉದಾಹರಣೆಗೆ- ಹೆಚ್ಚು ಲಾಭ ತರುವ 4ಎ, 5ಎ ಸ್ಪೆಕ್ಟ್ರಂ ಹಂಚುವುದಕ್ಕೆ ಬಿಎಸ್‌ಎನ್‌ಎಲ್ ಅನ್ನು ಕೈ ಬಿಟ್ಟು, ರಿಲಯನ್ಸ್‌ನ ಜಿಯೋಗೆ ಆದ್ಯತೆ ನೀಡಿದ್ದು ಏಕೆ? ಈ ವಿಚಾರದಲ್ಲಿ ಬಿಎಸ್‌ಎನ್‌ಎಲ್‌ಅನ್ನು ಮಲ ಮಗನಂತೆ ನಡೆಸಿಕೊಂಡಿದ್ದಲ್ಲದೇ, ಖಾಸಗಿ ಕಂಪನಿಗಳಿಗೆ ಮಣೆ ಹಾಕಿದ್ದು ಬಿಎಸ್‌ಎನ್‌ಎಲ್ ಗೆ ಮರ್ಮಾಘಾತ ಕೊಟ್ಟಿದೆ.
Advertisement
ಟೆಲಿಕಾಮ್ ವಲಯದಲ್ಲಿ ಜಿಯೋ ಪ್ರವೇಶವಾದನಂತರ 30,000 ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿದ್ದಾರಂತೆ. ಯೂನಿನಾರ್, ಏರ್‌ಸೆಲ್, ಟಾಟಾ ಟೆಲಿ ಸರ್ವೀಸ್‌ದಂಥ ಕಂಪನಿಗಳು ಬಾಗಿಲು ಮುಚ್ಚಿದೆ. ಈಗ ಬಿಎಸ್‌ಎನ್‌ಎಲ್ ಸರದಿ. ನೀತಿ ಆಯೋಗವು ಬಿಎಸ್‌ಎನ್‌ಎಲ್ ಅನ್ನು ಪುನರುಜ್ಜೀವನ ಗೊಳಿಸುವ ಸಲಹೆಯನ್ನು ತಿರಸ್ಕರಿಸಿ, ಅದನ್ನು ನಷ್ಟ ಅನುಭವಿಸುವ ಸಾರ್ವಜನಿಕ ರಂಗದ ಉದ್ಯಮಗಳ ಪಟ್ಟಿಗೆ ಸೇರಿಸಿದ್ದಂತೂ ದೊಡ್ಡ ಹಿನ್ನಡೆಯೇ ಸರಿ. ಖಾಸಗಿ ಟೆಲೆಕಾಮ್ ಕಂಪನಿಗಳು 4ಎ ಮತ್ತು 5ಎ ಸ್ಪೆಕ್ಟ್ರಂ ಅಪರೇಟ್ ಮಾಡುತ್ತಿದ್ದು, ಬಿ.ಎಎಸ್‌ಎನ್‌ಎಲ್ ಗೆ ಅದರ ಅಗತ್ಯವಿಲ್ಲ. ಒಂದು ಪಕ್ಷ ಅದು ದೊರಕಿದರೂ ಲಾಭ ಮಾಡಲು ಸಾಧ್ಯವಿಲ್ಲ ಎನ್ನುವ ಕೇಂದ್ರ ಸರ್ಕಾರದ ಧೋರಣೆಯೇ ಬಿಎಸ್‌ಎನ್‌ಎಲ್ ತನ್ನ ಮಾರುಕಟ್ಟೆಯಲ್ಲಿ ಶೇರ್ ಕಳೆದುಕೊಳ್ಳುವಂತೆ ಮಾಡಿದೆ. ಸ್ಪರ್ಧಿಗಳ ಸರಕು ಮತ್ತು ಸೇವೆಗಳಿಗಿಂತ ಕಡಿಮೆ ದರ ನಿಗದಿ ಮಾಡಿ , ಸ್ಪರ್ಧಿಸದಂತೆ ಮಾಡಿ, ಅವು ಮಾರುಕಟ್ಟೆ ಬಿಟ್ಟು ಹೋಗುವಂತೆ ಮಾಡುವ ರಿಲಯನ್ಸ್ ಜಿಯೋ ಕಂಪೆನಿಯ ಟrಛಿಛಚಠಿಟ್ಟy ಟrಜಿcಜಿnಜ ಬಿಎಸ್‌ಎನ್‌ಎಲ…ಅನ್ನು ಈ ಸ್ಥಿತಿಗೆ ತಂದಿದೆ ಎಂದು ಟೆಲೆಕಾಮ… ಕಾರ್ಮಿಕ ಸಂಘ ಆಪಾದಿಸುತ್ತಿದೆ.
ಬ್ಯಾಂಕಿಂಗ್ ಉದ್ಯಮದಲ್ಲಿ ನವಪೀಳಿಗೆಯ ಖಾಸಗಿ ಬ್ಯಾಂಕುಗಳ (new generation private banks) ಆಗಮನದ ನಂತರ ಸಾರ್ವಜನಿಕ ರಂಗದ ಬ್ಯಾಂಕುಗಳ ವ್ಯವಹಾರದ ಮೇಲೆ ಪರಿಣಾಮ ಆಗಿದೆ. ಇದೇ ರೀತಿ, ಮಾರುಕಟ್ಟೆ ಶೇರ್ ಅನ್ನು ಕ್ರಮೇಣ ಕಳೆದುಕೊಳ್ಳುತ್ತಿರುವಂತೆ ಟೆಲೆಕಾಮ… ವಲಯದಲ್ಲಿ ಖಾಸಗಿ ತರಂಗಗಳು ಮಿಡಿಯ ತೊಡಗಿದ ಮೇಲೆ ಸಾರ್ವಜನಿಕ ರಂಗದ ಬಿಎಸ್‌ಎನ್‌ಎಲ…ನ ಟ್ರಿಣ… ಟ್ರಿಣ… ಸದ್ದು ಕಡಿಮೆಯಾಗುತ್ತಾ ಬಂದಿದೆ ಎನ್ನುವುದು ರಹಸ್ಯವಲ್ಲ. ತಮ್ಮ ನವನವೀನ ಪ್ರಾಡಕ್ಟ್ಗಳು, ಸೇವೆಗಳು ಮತ್ತು ಆವಿಷ್ಕಾರಗಳಿಂದ ಬಿಎಸ್‌ಎನ್‌ಎಲ್‌ನ ಗ್ರಾಹಕರನ್ನು ಖಾಸಗಿ ಟೆಲೆಕಾಮ… ಕಂಪನಿಗಳು ಹಿಂಡು ಹಿಂಡಾಗಿ ಎಳೆಯುತ್ತಿರಲು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕುಳಿಯಲು, ಬೆಳೆಯಲು innovate, change, modernise or else perish ಎನ್ನುವ ಮಂತ್ರವನ್ನು ಪಠಿಸಬೇಕಿತ್ತು.
ಬಿಎಸ್‌ಎನ್‌ಎಲ್ನ ಸೇವಾ ವಿಳಂಬ, ಯೋಜನಾ ಜಾರಿ, ದೂರು ನಿರ್ವಹಣೆಯ ರೀತಿ ಈ ಸ್ಥಿತಿಗೆ ಕಾರಣ ಎನ್ನುವ ಆರೋಪದ ಬಗ್ಗೆ ಗಮನ ಹರಿಸಬೇಕು. ಆದರೆ, ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಅನ್ನೋದು ಕೂಡ ಸುಳ್ಳೇನಲ್ಲ. ಉದಾಹರಣೆಗೆ, ಏರ್ ಇಂಡಿಯಾ. ಇದೂ ಕೂಡ ಬಿಎಸ್‌ಎನ್‌ಎಲ್ ರೀತಿಯೇ ಸಾರ್ವಜನಿಕ ರಂಗದಲ್ಲಿದೆ. ಅದು ನಷ್ಟ ಅನುಭವಿಸುತ್ತಿರುವುದರಿಂದ ಉಳಿಸಲು ತೆರಿಗೆದಾರನ ಹಣವನ್ನು ಧಾರಾಳವಾಗಿ ನೀಡುತ್ತಿರುವ ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ… ವಿಷಯದಲ್ಲಿ ವಿಭಿನ್ನ ನಿಲುವು ಹೊಂದಿದೆಯಂತೆ.
ಹೀಗೊಂದಿಷ್ಟು ಅಂತೆ,ಕಂತೆ…
ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ…ಅನ್ನು ಮುಚ್ಚುವುದಿಲ್ಲ. ಅದರ ಬದಲಿಗೆ ಪುನರುಜ್ಜೀವನಕ್ಕೆ ಕ್ರಮ ತೆಗೆದು ಕೊಳ್ಳುತ್ತಿದೆ ಎಂದು ಹೇಳುತ್ತಿದ್ದರೂ ಈ ಹೇಳಿಕೆಯನ್ನು ಜನರ ಅನುಮಾನದಿಂದ ನೋಡುತ್ತಿ¨ªಾರೆ. ಕೆಲ ಮೂಲಗಳ ಪ್ರಕಾರ, ಏರುತ್ತಿರುವ ನಷ್ಟದಿಂದ ಬಿಎಸ್‌ಎನ್‌ಎಲ… ಉಳಿಸಲು ಸರ್ಕಾರ ಕೆಲವು ಕ್ರಮಗಳನ್ನು ಸೂಚಿಸಿದ್ದು ಅವು ಹೀಗಿವೆ. 1) ಸಂಸ್ಥೆಯನ್ನು ಪೂರ್ಣವಾಗಿ ಮುಚ್ಚುವುದು.
2) ಈ ಸಂಸ್ಥೆಯಿಂದ ಬಂಡವಾಳ ಹಿಂಪಡೆದು ಖಾಸಗಿಯವರಿಗೆ ನಡೆಸಲು ಕೊಡುವುದು.
3) ಏರ್ ಇಂಡಿಯಾಕ್ಕೆ ನೀಡಿದಂತೆ ಹಣಕಾಸು ಸಹಾಯ ಮಾಡಿ ಸಂಸ್ಥೆಗೆ ಆರ್ಥಿಕ ಪುನಶ್ಚೇತನ ನೀಡುವುದು.
4) ನಿವೃತ್ತಿ ವಯಸ್ಸನ್ನು 60 ರಿಂದ 58 ಕ್ಕೆ ಇಳಿಸಿ,ವಾರ್ಷಿಕ 3000 ಕೋಟಿ ಉಳಿಸುವುದು.
5) ಈ ಸಂಸ್ಥೆಗೆಹಲವು ಹಳೆಯ ಕಟ್ಟಡಗಳು ಇದ್ದು ಅವುಗಳನ್ನು ಕಮರ್ಷಿಯಲ… ಆಗಿ ಬಳಸಿಕೊಳ್ಳುವುದು.
6) ಸುಮಾರು 35,000 ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೊಳಿಸುವುದು. ರಮಾನಂದ ಶರ್ಮಾ