Advertisement

BSNL; ಆಯ್ದ ನಗರಗಳಲ್ಲಿ 5G ಸಿಮ್‌ ಬಿಡುಗಡೆ

01:12 AM Aug 03, 2024 | Team Udayavani |

ಹೊಸದಿಲ್ಲಿ: ದೇಶದ ಆಯ್ದ ನಗರಗಳಲ್ಲಿ ಬಿಎಸ್‌ಎನ್‌ಎಲ್‌ ತನ್ನ 5ಜಿ ಸಿಮ್‌ ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿ ನೆಟ್‌ವರ್ಕ್‌ ಅಪ್‌ಡೇಟ್‌ ಮಾಡುವ ಮಹತ್ತರ ಯೋಜನೆ ಹೊಂದಿರುವುದಾಗಿ ತಿಳಿಸಿದೆ. ಸದ್ಯ ಆಂಧ್ರ, ತೆಲಂಗಾಣ, ಕೇರಳದಲ್ಲಿ ಈ ಸಿಮ್‌ ಲಭ್ಯವಿದೆ. ಇಂಟರ್‌ನೆಟ್‌ ಸ್ಪೀಡ್‌ ಹೆಚ್ಚಿಸಲು ತೀರ್ಮಾನಿಸಿದೆ. ಈ ಭಾಗದ ಜನರಿಗೆ ಅಧಿಕೃತ ಬಿಎಸ್‌ಎನ್‌ಎಲ್‌ ಸಿಮ್‌ ಮಾರಾಟ ಮಾಡುವವರ ಬಳಿ ಸಿಮ್‌ ಲಭ್ಯವಿದ್ದು, ಹಳೆ ಸಿಮ್‌ಗಳನ್ನು 5ಜಿಗೆ ಬದಲಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಹೊಸ 5ಜಿ ಸಿಮ್‌ ವಿಶಿಷ್ಟ ಮಾದರಿಯಲ್ಲಿದ್ದು, 5ಜಿ ಎಂದು ತ್ರಿವರ್ಣದಲ್ಲಿ ಬರೆದಿದೆ. ಸಂಪೂರ್ಣವಾಗಿ 5ಜಿ ರೂಪಾಂತರಗೊಂಡ ಬಳಿಕ, ಹೊಸ ಸಿಮ್‌ ಅಗತ್ಯವಿಲ್ಲದೇ ಹಳೆ ಸಿಮ್‌ ಮೂಲಕವೇ 5ಜಿ ಸೌಲಭ್ಯ ಪಡೆಯಬಹುದು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next