Advertisement

ಗದ್ದಲದ ನಡುವೆಯೂ ಶಾಸಕರ ಸಂಬಳ ಹೆಚ್ಚಳ ವಿಧೇಯಕ ಅಂಗೀಕಾರ: ಯಾರಿಗೆ ಎಷ್ಟಿದೆ ಸಂಬಳ

01:22 PM Feb 22, 2022 | Team Udayavani |

ಬೆಂಗಳೂರು: ವಿಧಾನ ಮಂಡಲದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೂ ಶಾಸಕರ ಭತ್ಯೆ ಹೆಚ್ಚಳದ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ವಿಧಾನಸಭೆ, ವಿಧಾನ ಪರಿಷತ್ ಶಾಸಕರು, ವಿಪಕ್ಷ ನಾಯಕರ ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವೂ ಅಂಗೀಕಾರ ಮಾಡಲಾಗಿದೆ.

Advertisement

ಸಂಬಳ ಭತ್ಯೆ ಹೆಚ್ಚಳ ವಿವರ

ಸಭಾಧ್ಯಕ್ಷರು/ ಉಪಸಭಾಧ್ಯಕ್ಷ:

ಸಂಬಳ: 50,000 ರೂ. ದಿಂದ 75,000 ರೂ. ಗೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ: ₹3,00,000 ದಿಂದ ₹ 4,00,000

Advertisement

ಮನೆ ಬಾಡಿಗೆ: ₹80,000 ರಿಂದ ₹1,60,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30 ರಿಂದ ₹40

ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000

ಹೊರ ರಾಜ್ಯ ಪ್ರವಾಸ: ದಿನಕ್ಕೆ ₹2500 +₹5000 ದಿಂದ ₹3000+₹7000

ಇದನ್ನೂ ಓದಿ:ಉಗ್ರರನ್ನು ಗುರುತಿಸಲು “ಗಾಜಿಯಾಬಾದ್ ಕವಿ” ಯನ್ನು ನೇಮಕ ಮಾಡಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್

ವಿಪಕ್ಷ ನಾಯಕ

ಸಂಬಳ: ₹40,000 ದಿಂದ ₹ 60,000 ಗೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ: ₹2,00,000 ದಿಂದ ₹ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30

ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000

ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ಶಾಸಕರ ಭತ್ಯೆ:

ಸಂಬಳ: ₹20,000 ದಿಂದ ₹ 40,000 ಗೆ ಹೆಚ್ಚಳ

ಕ್ಷೇತ್ರದ ಭತ್ಯೆ: ₹40,000 ರಿಂದ ₹60000

ಆತಿಥ್ಯ ವೇತನ (ವಾರ್ಷಿಕ): ₹2,00,000 ದಿಂದ ₹ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ತೆ: ಪ್ರತಿ ಕಿಲೋಮೀಟರ್ ₹25 ರಿಂದ ₹30

ದಿನ ಭತ್ಯೆ(ಪ್ರಯಾಣ): ದಿನಕ್ಕೆ ₹2000 ದಿಂದ ₹2500

ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,000 ರೂ. ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರೂ. ದಿಂದ 20,000 ರೂ. ಗೆ ಹೆಚ್ಚಳ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next