Advertisement

ಪ್ರೇಕ್ಷಕರ ಮುಂದೆ ಸಲಗ ರೊಮ್ಯಾಂಟಿಕ್‌ ಸಾಂಗ್‌

03:49 PM Sep 04, 2020 | Suhan S |

ಕೋವಿಡ್ ಆತಂಕದಿಂದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದ್ದ “ಸಲಗ’ ಚಿತ್ರತಂಡ, ಲಾಕ್‌ಡೌನ್‌ ಸಡಿಲವಾದ ಬಳಿಕ ಮತ್ತೆ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ಮಳೆಯ ಆರ್ಭಟದ ನಡುವೆಯೇ “ಸಲಗ’ ಚಿತ್ರತಂಡ, ಚಿತ್ರದಲ್ಲಿ ಬರುವ ರೊಮ್ಯಾಂಟಿಕ್‌ ಹಾಡೊಂದನ್ನು ಮಲೆನಾಡಿನ ರಮಣೀಯ ತಾಣಗಳಲ್ಲಿ ಸದ್ದಿಲ್ಲದೆ ಚಿತ್ರೀಕರಿಸಿತ್ತು.

Advertisement

ಇದೀಗ ಆ ರೊಮ್ಯಾಂಟಿಕ್‌ ಹಾಡನ್ನು ಚಿತ್ರತಂಡ, ಪ್ರೇಕ್ಷಕರಿಗೆ ತೋರಿಸೋದಕ್ಕೆ ತಯಾರಾಗಿದೆ. ಹೌದು, ಸಂಗೀತ ನಿರ್ದೇಶಕ ಚರಣ್‌ ರಾಜ್‌ ಸಂಗೀತ ಸಂಯೋಜನೆಯ “ಮಳೆಯೇ.. ಮಳೆಯೇ.. ಅಂಬೆಗಾಲಿಡುತ್ತಾ ಸುರಿಯೇ…’ ಅನ್ನೋ ರೊಮ್ಯಾಂಟಿಕ್‌ ಹಾಡಿಗೆ ದುನಿಯಾ ವಿಜಯ್‌ ಮತ್ತು ಸಂಜನಾ ಆನಂದ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದು, ಈ ವಿಡಿಯೋ ಹಾಡನ್ನ ಇದೇ ಸೆ. 5ಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಇನ್ನೊಂದು ವಿಶೇಷವೆಂದರೆ, ಪ್ರೀತಿ ಮತ್ತು ಮಳೆಯ ನಡುವಿನ ಹೋಲಿಕೆಯಿರುವ ಈ ರೊಮ್ಯಾಂಟಿಕ್‌ ಹಾಡು ನೈಜವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಜಡಿ ಮಳೆಯ ನಡುವೆಯೇ ಚಿತ್ರತಂಡ ಮುಳ್ಳಯ್ಯನಗಿರಿ, ಸಕಲೇಶಪುರ ಸೇರಿ ಪಶ್ಚಿಮ ಘಟ್ಟಗಳ ಸುಂದರ ತಾಣಗಳಲ್ಲಿ ಈ ಹಾಡಿನ ದೃಶ್ಯಗಳನ್ನು ಸೆರೆಹಿಡಿದಿದೆ. ಸುಮಾರು ನಾಲ್ಕು ದಿನಗಳ ಕಾಲ ಸರ್ಕಾರದ ಲಾಕ್‌ಡೌನ್‌ ಮಾರ್ಗಸೂಚಿ ನಿಯಮಗಳನ್ನು ಪಾಲಿಸಿಕೊಂಡು ನಾಯಕ – ನಾಯಕಿ ಸೇರಿ ಕೇವಲ 12 ಮಂದಿ ತಂತ್ರಜ್ಞಾನದೊಂದಿಗೆ ಈ ಹಾಡನ್ನ ಚಿತ್ರೀಕರಿಸಲಾಗಿದೆ. ಛಾಯಾಗ್ರಹಕಶಿವಸೇನ ಕ್ಯಾಮರಾದಲ್ಲಿ “ಸಲಗ’ದ ಈ ಹಾಡನ್ನು ಸೆರೆಹಿಡಿದಿದ್ದಾರೆ.

ಇನ್ನು ನಟ ದುನಿಯಾ ವಿಜಯ್‌ ಮೊದಲ ಬಾರಿಗೆ ತೆರೆಹಿಂದೆ ನಿಂತು “ಸಲಗ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಡಾಲಿ ಧನಂಜಯ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆ.ಪಿ ಶ್ರೀಕಾಂತ್‌ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಸೆಟ್ಟೇರಿದಾಗಿ  ನಿಂದಲೂ ಒಂದಷ್ಟು ಸೌಂಡ್‌ ಮಾಡುತ್ತಿರುವ “ಸಲಗ’ದ ಹಾಡು ಹೇಗಿರಲಿದೆ ಅನ್ನೋದು ನಾಳೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next