Advertisement

ʼಸಲಾರ್‌ʼ – ʼಕೆಜಿಎಫ್‌ʼ ಲಿಂಕ್‌: ಟೀಸರ್‌ ನಲ್ಲಿ ಮಹತ್ವದ ಸುಳಿವು ಪತ್ತೆ ಹಚ್ಚಿದ ಫ್ಯಾನ್ಸ್

10:46 AM Jul 06, 2023 | Team Udayavani |

ಹೈದರಾಬಾದ್: ಬಿಗೆಸ್ಟ್‌ ಪ್ಯಾನ್‌ ಇಂಡಿಯಾ ʼಸಲಾರ್‌ʼ ಟೀಸರ್‌ ರಿಲೀಸ್‌ ಆಗಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ಗೂ  ಅಧಿಕ ವೀಕ್ಷಣೆ ಕಂಡು ಟ್ರೆಂಡಿಂಗ್‌ ನಲ್ಲಿದೆ.

Advertisement

ʼಸಲಾರ್‌ʼ ಸಿನಿಮಾ ಟೀಸರ್‌ ಡೇಟ್‌ ರಿಲೀಸ್‌ ಆದ ದಿನವೇ ಅದರ ಸಮಯವನ್ನು ಕೆಜಿಎಫ್‌ ಸಿನಿಮಾಕ್ಕೆ ಹೋಲಿಕೆ ಮಾಡಲಾಗಿತ್ತು. ಕೆಜಿಎಫ್‌ ನಲ್ಲಿ ಯಶ್‌ ಮುಳುಗುವುದು ಮುಂಜಾನೆ 5:12 ಕ್ಕೆ ಅದೇ ಸಮಯದಲ್ಲಿ ʼಸಲಾರ್‌ʼ ಟೀಸರ್‌ ಆಗುವುದು ಎರಡೂ ಸಿನಿಮಾಕ್ಕೂ ಏನೋ ಒಂದು ಲಿಂಕ್‌ ಇದೆ ಎಂದು ಫ್ಯಾನ್ಸ್‌ ಗಳು ಊಹಿಸಿದ್ದಾರೆ.

ಅದರಂತೆ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಇದರಲ್ಲೂ ಕೆಲ ಹೋಲಿಕೆಗಳನ್ನು ಮಾಡಲಾಗಿದೆ.  ಕೆಜಿಎಫ್ ನಲ್ಲಿರುವಂತೆ ಇಲ್ಲಿಯೂ ನಾಯಕನ ಕಥೆ ಹೇಳಲು ಒಬ್ಬರಿದ್ದಾರೆ ಎನ್ನುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಬಾಲಿವುಡ್ ನ ಹಿರಿಯ ಟಿನು ಆನಂದ್ “ಸಿಂಹ.. ಚಿರತೆ.. ಹುಲಿ.. ಆನೆ.. ತುಂಬಾ ಡೇಂಜರಸ್.. ಎನ್ನುವಾಗ ದೈತ್ಯ ಗನ್ ಗಳನ್ನು ಹಿಡಿದು ನೂರಾರು ಜನರನ್ನು ಯುದ್ಧದ ಅಖಾಡದಲ್ಲಿ ಸಂಹಾರ ಮಾಡುವ ನಾಯಕ ನಟ ಪ್ರಭಾಸ್ ಅವರನ್ನು ಇಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್ ಸೆಟ್ ನಲ್ಲಿ ಫೈಟ್ ಗಳಿವೆ, ‘ಕೆಜಿಎಫ್’ ನಂತೆ ಇಲ್ಲೂ ಒಂದು ದೊಡ್ಡ ಅಖಾಡದಲ್ಲಿ ನೂರಾರು ಜನರೊಂದಿಗೆ ಒಂಟಿಯಾಗಿಯೇ ಹೋರಾಡುವ ನಾಯಕನ ಕಿಚ್ಚು ಇರುವುದು ಟೀಸರ್ ಝಲಕ್ ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ‌ಆ್ಯಕ್ಷನ್ ಅಖಾಡದಲ್ಲಿ ಈತ ಸಿಂಹ, ಚಿರತೆ, ಆನೆಗಿಂತಲೂ ಅಪಾಯಕಾರಿ: ‘ಸಲಾರ್’ ಟೀಸರ್ ಔಟ್

‌ಆ್ಯಕ್ಷನ್ ದೃಶ್ಯಗಳನ್ನು ನೋಡುವಾಗ ಪ್ರೇಕ್ಷಕರಿಗೆ  ಕೆಜಿಎಫ್‌ ನೆನಪಾಗುತ್ತದೆ. ಇದನ್ನೇ ಇಟ್ಟುಕೊಂಡು ಕೆಲ ನೆಟ್ಟಿಗರು ʼಸಲಾರ್‌ʼ – ಕೆಜಿಎಫ್‌ ಗೆ ಲಿಂಕ್‌ ಇದೆ ಎಂದು ಕೆಲ ಕಾರಣವನ್ನು ಕೊಟ್ಟಿದ್ದಾರೆ. ಮುಖ್ಯವಾಗಿ ಕೆಜಿಎಫ್‌ ನಲ್ಲಿ C-516 ಬರೆದಿರುವ ಒಂದು ಕಂಟೇನರ್ ಇದೆ. ಇನ್ನು ʼಸಲಾರ್‌ʼ ನಲ್ಲಿ ಅದೇ C-516 ಎಂದು ಬರೆದಿರುವ ಕಂಟೇನರ್ ಇದೆ. ಇದು ಸಲಾರ್‌ – ಕೆಜಿಎಫ್‌ ಲಿಂಕ್‌ ಗೆ ಸುಳಿವು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

Advertisement

ಇನ್ನೊಂದು  ವಿಶೇಷವೆಂದರೆ ಕೆಜಿಎಫ್‌ ನಲ್ಲಿ ನಟಿಸಿರುವ ಈಶ್ವರಿ ಅವರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನುವುದು.

ಸೆ.28 ರಂದು ವಿಶ್ವದೆಲ್ಲೆಡೆ ʼಸಲಾರ್‌ʼ ಸಿನಿಮಾ  ತೆರೆಗೆ ಬರಲಿದ್ದು, ಈ ಸಿನಿಮಾದಲ್ಲಿ ಪ್ರಭಾಸ್‌ , ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next