Advertisement

‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

02:39 PM May 13, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟು ನಂತರ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುವರು ಸಾಕಷ್ಟು ಮಂದಿ. ಆ ಸಾಲಿನಲ್ಲಿ ಇದೀಗ “ಉಳಿದವರು ಕಂಡತೆ’, “ರಿಕ್ಕಿ’ ಖ್ಯಾತಿಯ ರಾಹುಲ್‌.ಕೆ ಕೂಡಾ ಸೇರಿದ್ದಾರೆ. ಅವರ ನಿರ್ದೇಶನದ “ಸಕುಟುಂಬ ಸಮೇತ’ ಚಿತ್ರ ಮೇ 20ಕ್ಕೆ ತೆರೆಕಾಣುತ್ತಿದೆ.

Advertisement

ಸದಾ ಹೊಸಬರ ಹಾಗೂ ವಿಭಿನ್ನ ಪ್ರಯೋಗಕ್ಕೆ ಸಾಥ್‌ ನೀಡುವ ರಕ್ಷಿತ್‌ ಶೆಟ್ಟಿ, ರಾಹುಲ್‌ ಅವರ “ಸಕುಟುಂಬ ಸಮೇತ’ಕ್ಕೆ ಸಾಥ್‌ ನೀಡಿದ್ದಾರೆ. “ಪರಂವಾ ಸ್ಟುಡಿಯೋಸ್‌’ ಮೂಲಕ ರಕ್ಷಿತ್‌ ಶೆಟ್ಟಿ ನಿರ್ಮಿಸುತ್ತಿರುವ “ಸಕುಟುಂಬ ಸಮೇತ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಚಿತ್ರದ ಬಗ್ಗೆ ಮಾತನಾಡುವ ರಕ್ಷಿತ್‌ ಶೆಟ್ಟಿ, “ಈ ಮೊದಲು ಚಿತ್ರವನ್ನು ಕೇವಲ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವು. ಆದರೆ ಚಿತ್ರ ಚೆನ್ನಾಗಿದೆ, ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿ ಎಂಬ ಮಾತುಗಳು ಕೇಳಿ ಬಂದವು. ಹಾಗಾಗಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯತ್ತ ಗಮನ ಹರಿಸಿದ್ದೇವೆ. ಚಿತ್ರದಲ್ಲಿ ಕಾಮಿಡಿ ಸೆಂಟಿಮೆಂಟ್‌ ಎರಡು ಸುಂದರವಾಗಿ ಮೂಡಿಬಂದಿದೆ. ಚಿತ್ರದ ಓಟಿಟಿ , ಸ್ಯಾಟ್‌ಲೈಟ್‌ ಹಕ್ಕು ಖಾಸಗಿ ವಾಹಿನಿಗೆ ಮಾರಾಟವಾಗಿದ್ದು, ಬಿಡುಗಡೆ ಮುನ್ನವೇ ಡಬಲ್‌ ಲಾಭದಲ್ಲಿದ್ದೇವೆ’ ಎಂದರು.

ಇದನ್ನೂ ಓದಿ:‘ಕಸ್ತೂರಿ ಮಹಲ್’; ಭಯಪಡಿಸಲು ಶಾನ್ವಿ ರೆಡಿ

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಾಹುಲ್‌ “ಇದು ಒಂದು ಫ್ಯಾಮಿಲಿ ಡ್ರಾಮಾ. ಒಂದು ಹುಡುಗ-ಹುಡುಗಿ ಮದುವೆ ನಿಶ್ಚಯವಾಗಿರುತ್ತದೆ. ಮದುವೆಗೂ ಒಂದು ವಾರ ಮೊದಲು ಹುಡುಗಿ ಮದುವೆ ನಿರಾಕರಿಸುತ್ತಾಳೆ. ನಂತರ ಏನು ಎಂಬುದೇ ಸಿನಿಮಾ ಕಥೆ’ ಎಂದರು.

Advertisement

ನಟ ಅಚ್ಯುತ್‌ ಕುಮಾರ್‌ ಮಾತನಾಡಿ “ಇದು ಒಂದು ಡ್ರಾಯಿಂಗ್‌ ರೂಮ್‌ನಲ್ಲೇ ನಡೆಯುವ ಕಥೆ. ಮನೆಯ ವಿವಿಧ ಕೊನೆಯಲ್ಲಿ ಒಂದು ಕಥೆಯನ್ನು ತೋರಿಸುವುದ ಸುಲಭದ ಮಾತಲ್ಲ. ಇದನ್ನು ನಿರ್ದೇಶಕರು , ಕಲಾವಿದರು ಮಾಡಿ ತೋರಿಸಿದ್ದಾರೆ. ಸಾಮಾನ್ಯ ಮನೆಗಳಲ್ಲಿ ನಡೆಯುವ ಸನ್ನಿವೇಶ, ಮಾತುಕತೆಗಳನ್ನೇ ವಿಭಿನ್ನವಾಗಿ, ಕುತೂಹಲ ಮೂಡಿಸುವ ರೀತಿಯಲ್ಲಿ ಎಲ್ಲರೆದುರು ಇಡುವ ಸುಂದರ ಪ್ರಯತ್ನ ಇಡೀ ಚಿತ್ರತಂಡದ್ದಾಗಿದೆ’ ಎಂದರು

ಮೇ 16 ಚಾರ್ಲಿ ಟ್ರೇಲರ್‌

ರಕ್ಷಿತ್‌ ಶೆಟ್ಟಿ, ನಟನೆ ಹಾಗೂ ನಿರ್ಮಾಣದ “777 ಚಾರ್ಲಿ’ ಚಿತ್ರದ ಟ್ರೇಲರ್‌ಗೆ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮೇ 16 ರಂದು ಮಧ್ಯಾಹ್ನ 12.12ಕ್ಕೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದ್ದು, ಏಕಕಾಲಕ್ಕೆ ಐದು ಭಾಷೆಗಳಲ್ಲೂ ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ. ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು ಸಿನಿಮಾ ಬಿಡುಗಡೆಗೆ ಮುಂದಾಗಿವೆ. ತೆಲುಗಿನಲ್ಲಿ ರಾಣಾ ದಗ್ಗುಭಾಟಿ, ಮಲಯಾಳಂನಲ್ಲಿ ಪೃಥ್ವಿರಾಜ್‌, ಹಿಂದಿಯಲ್ಲಿ ಯುಎಫ್ಒ ಸಂಸ್ಥೆ ಬಿಡುಗಡೆ ಮಾಡಲಿದೆ. “777 ಚಾರ್ಲಿ’ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಶ್ವಾನ ಹಾಗೂ ಮನುಷ್ಯನ ಬಾಂಧವ್ಯದ ಸುತ್ತ ಸಾಗುತ್ತದೆ.

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next