Advertisement

ಏಶ್ಯನ್‌ ಒಲಿಂಪಿಕ್‌ ಬಾಕ್ಸಿಂಗ್‌: ಕ್ವಾ.ಫೈನಲ್‌ಗೆ ಸಾಕ್ಷಿ ಚೌಧರಿ

10:07 AM Mar 06, 2020 | sudhir |

ಹೊಸದಿಲ್ಲಿ: ಮಾಜಿ ಜೂನಿಯರ್‌ ವಿಶ್ವ ಚಾಂಪಿಯನ್‌ ಸಾಕ್ಷಿ ಚೌಧರಿ (57 ಕೆಜಿ) ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಶ್ಯನ್‌ ಒಲಿಂಪಿಕ್‌ ಬಾಕ್ಸಿಂಗ್‌ ಅರ್ಹತಾ ಸುತ್ತಿನ ಸ್ಪರ್ಧೆ ಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.
ಬುಧವಾರದ ಮುಖಾಮುಖೀಯಲ್ಲಿ ಅವರು ಏಶ್ಯನ್‌ ಬೆಳ್ಳಿ ಪದಕ ವಿಜೇತೆ, ಥಾಯ್ಲೆಂಡ್‌ನ‌ ನಿಲವಾನ್‌ ಟೆಕಾಸುಪ್‌ ವಿರುದ್ಧ ಗೆಲುವು ಸಾಧಿಸಿದರು. 2 ಬಾರಿಯ ಯುವ ವಿಶ್ವ ಚಾಂಪಿಯನ್‌ ಆಗಿರುವ ಸಾಕ್ಷಿ ಚೌಧರಿ ಕ್ವಾರ್ಟರ್‌ ಫೈನಲ್‌ನಲ್ಲಿ ಕೊರಿಯಾದ ಇಮ್‌ ಏಜಿ ವಿರುದ್ಧ ಸೆಣಸಲಿದ್ದಾರೆ. ಈ ಪಂದ್ಯ ಮಾ. 9ರಂದು ನಡೆಯಲಿದೆ. ಸೆಮಿಫೈನಲ್‌ ತಲುಪಿದರೆ ಸಾಕ್ಷಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next