Advertisement
ಸಿರಿಬಾಗಿಲು ಹೊರತುಪಡಿಸಿ ಉಳಿದ ಎಲ್ಲ ಕಡೆ ತೆರವು ಕಾರ್ಯ ಪೂರ್ತಿಯಾಗಿ ರೈಲು ಓಡಾಟಕ್ಕೆ ಮಾರ್ಗ ಸಿದ್ಧವಾಗಿದೆ. ಸಿರಿಬಾಗಿಲಿನ ಕೊಡವರಹಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿಯುತ್ತಿರುವುದು ಕಾಮಗಾರಿಗೆ ಅಡ್ಡಿಯಾಗಿದೆ.ಸಿರಿಬಾಗಿಲು ಮಾರ್ಗ 86ರ ಬಳಿ ಭಾರೀ ಗಾತ್ರದ ಗುಡ್ಡ ಜರಿದು ರೈಲು ಟನೆಲ್ ಮೇಲೆ ಬಿದ್ದಿತ್ತು. ಇದರಿಂದ 170 ಮೀ. ಉದ್ದದ ಟನೆಲ್ ಸಂಪೂರ್ಣ ಮಣ್ಣಿನಡಿ ಮುಚ್ಚಿತ್ತು. ಟೆನಲ್ ಮೇಲೆ 25 ಮೀ. ಎತ್ತರಕ್ಕೆ ಮಣ್ಣು ಆವರಿಸಿಕೊಂಡಿತ್ತು. ಇದು ಗುಡ್ಡ ಕುಸಿತದ ತೀವ್ರತೆಗೆ ಸಾಕ್ಷಿಯಾಗಿದೆ.
ಸುಮಾರು 13 ಹಿಟಾಚಿಗಳು ಕಳೆದ ಒಂದು ತಿಂಗಳಿಂದ ನಿರಂತರ ಹಗಲು ರಾತ್ರಿ ಪಾಳಿಯಲ್ಲಿ ಟೆನಲ್ ಮೇಲೆ ಹಾಗೂ ಹಳೀ ಮೇಲೆ ಬಿದ್ದ ಮಣ್ಣು ತೆರವು ಕಾರ್ಯದಲ್ಲಿ ತೊಡಗಿವೆ. ಒಂದೆಡೆ ಟೆನಲ್ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ನಡೆಸುತ್ತಿದ್ದಂತೆ ಇನ್ನೊಂದು ಕಡೆ ಗುಡ್ಡ ಜರಿಯುತ್ತಿದೆ. ಸ್ಥಳವು ಇಕ್ಕಟ್ಟಾಗಿದೆ. ಒಂದು ಕಡೆ ಗುಡ್ಡ ಇನ್ನೊಂದು ಕಡೆ ಪ್ರಪಾತವಿದೆ. ಜಾಗದ ಕೊರತೆ ಇದೆ. ಇಲ್ಲಿ ಟಿಪ್ಪರ್ ಬಳಸಿ ಮಣ್ಣು ಸ್ಥಳಾಂತರಿಸಲೂ ಸಾಧ್ಯವಿಲ್ಲ. ಸ್ಥಳದಲ್ಲಿ ರೈಲ್ವೇ ಅಧಿಕಾರಿಗಳು, ಸಿಬಂದಿ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ. ಸಿರಿಬಾಗಿಲು ಬಳಿ ಮಣ್ಣು ತೆರವು ಕಾರ್ಯ ಪೂರ್ಣವಾದ ಬಳಿಕ ಕೆಟ್ಟು ಹೋದ ಸ್ಲಿàಪರ್‌ಗಳ ಮರುಜೋಡಣೆ ಕ್ಲಿಪ್ ಬಿಗಿಗೊಳಿಸುವುದು, ಮಾರ್ಗದ ಇತರ ದೋಷಗಳ ಪರಿಶೀಲನೆ ನಡೆದು ಬಳಿಕ ರೈಲ್ವೇ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಮಾರ್ಗದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆ ನಡೆಸಿ ರೈಲು ಓಡಾಟಕ್ಕೆ ಅನುಮತಿ ನೀಡಲಿದ್ದಾರೆ. ಸಕಲೇಶಪುರ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ನಡುವೆ 65 ಕಡೆ ಭೂಕುಸಿತ ಸಂಭವಿಸಿತ್ತು. ಬೃಹತ್ ಗಾತ್ರದ ಬಂಡೆಕಲ್ಲು, ಮಣ್ಣು ಗುಡ್ಡ ಮಾರ್ಗದ ಹಳಿ ಮೇಲೆ ಅಲ್ಲಲ್ಲಿ ಬಿದ್ದು ಭಾರೀ ಅನಾಹುತ ಸೃಷ್ಟಿಯಾಗಿತ್ತು.
Related Articles
ರವೀಂದ್ರ ದೀರೆಧಾರ್, ಸೀನಿಯರ್ ಡಿವಿಜನಲ್ ಎಂಜಿನಿಯರ್ ಮೈಸೂರು ರೈಲ್ವೇ ವಿಭಾಗ
Advertisement