Advertisement

ಸಕಲೇಶಪುರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದ ಉರಗ ತಜ್ಞ ಸ್ನೇಕ್ ಫರ್ಹಾನ್‌

05:46 PM Aug 19, 2022 | Team Udayavani |

ಸಕಲೇಶಪುರ: ತಾಲೂಕಿನ ನಡಹಳ್ಳಿ ಗ್ರಾಮದ ಸಮೀಪ ಕಾಣಿಸಿಕೊಂಡ ಭಾರಿ ಗಾತ್ರದ ಕಾಳಿಂಗಸರ್ಪವೊಂದನ್ನು ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ನಡಹಳ್ಳಿ ಸಮೀಪದ ಹೊನ್ನೆಹಿತ್ತಲು ಬಳಿ ಇರುವ ಪಾಲಾಕ್ಷ ಎಂಬುವರ ಮನೆ ಸಮೀಪ ಕಾಳಿಂಗಸರ್ಪವೊಂದು ಕಾಣಿಸಿಕೊಂಡಿದೆ. ಈ ಸಂಧರ್ಭದಲ್ಲಿ ಗ್ರಾಮಸ್ಥರು ಪಟ್ಟಣದ ಉರಗ ತಜ್ಞ ಸ್ನೇಕ್ ಫರ್ಹಾನ್‌ರವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಫರ್ಹಾನ್ ಭಾರಿ ಗಾತ್ರದ ಸುಮಾರು 11 ಅಡಿ ಉದ್ದದ ಕಾಳಿಂಗಸರ್ಪವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅರಣ್ಯ ಇಲಾಖೆಯ ಸುರ್ಪದಿಗೆ ನೀಡಿದ್ದು ನಂತರ ಕೆಂಪುಹೊಳೆ ರಕ್ಷಿತಾರಣ್ಯದಲ್ಲಿ ಕಾಳಿಂಗಸರ್ಪವನ್ನು ಬಿಡಲಾಗಿದೆ.

ಸ್ನೇಕ್ ಫರ್ಹಾನ್‌ರವರ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ಸಲ್ಲಿಸಿದ್ದು ಗ್ರಾಮಸ್ಥರ ಪರವಾಗಿ ತನು ಮಾತನಾಡಿ ಸ್ನೇಕ್ ಫರ್ಹಾನ್ ನಿರಂತರವಾಗಿ ಹಲವಾರು ಅಪಾಯಕಾರಿ ಹಾವುಗಳನ್ನು ಹಿಡಿಯುತ್ತಿದ್ದಾರೆ. ಅವರಿಗೆ ಅರಣ್ಯ ಇಲಾಖೆ ಯಾವುದೆ ಸಹಕಾರ ನೀಡುತ್ತಿಲ್ಲ. ಕನಿಷ್ಠ ಅವರಿಗೆ ಹಾವು ಹಿಡಿಯುವ ಕಿಟ್‌ನ್ನು ವಿತರಿಸಬೇಕು ಎಂದಿದ್ದಾರೆ.

ಮಲೆನಾಡಿನಲ್ಲಿ ಕಾಳಿಂಗಸರ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುವವರು ಎಚ್ಚರ ವಹಿಸಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next