Advertisement
ವಿವಿಧ ವಿಭಾಗಳ ಅರ್ಜಿಗಳು ಕಾಲಮಿತಿಯೊಳಗೆ ವಿಲೇವಾರಿಯಾಗುತ್ತಿದ್ದು, ಕಂದಾಯ ವಿಭಾಗದ ಅರ್ಜಿಗಳು ವಿವಿಧ ಕಾರಣಗಳಿಂದ ತಡವಾಗಿ ವಿಲೇವಾರಿಯಾಗುತ್ತಿವೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಕೆಲವು ಅರ್ಜಿಗಳು ಕೋರ್ಟ್‌ನಲ್ಲಿ ವ್ಯಾಜ್ಯ ಹೊಂದಿರುವುದರಿಂದ ಶೀಘ್ರ ವಿಲೇವಾರಿ ಮಾಡಲಾಗುತ್ತಿಲ್ಲ ಎನ್ನಲಾಗಿದೆ.
Related Articles
Advertisement
ಹರ್ಷ ಗುಪ್ತಾ ನೇತೃತ್ವದಲ್ಲಿ ಪ್ರತಿ ತಿಂಗಳು ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿಗೆ ಪರಿಶೀಲನಾ ಸಭೆ ನಡೆಸುತ್ತಿದ್ದು, ಬಿಬಿಎಂಪಿಯ ಸಹಾಯವಾಣಿ ಮೂಲಕವೂ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಅರ್ಜಿ ವಿಲೇವಾರಿ ವಿಳಂಬ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅದೇ ರೀತಿ ಸಕಾಲ ಯೋಜನೆಗೆ ಸಂಬಂಧಿಸಿದ ದೂರುಗಳಿದ್ದರೆ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹು ದಾಗಿದೆ. ಸಹಾಯವಾಣಿ: 080-22660000. ನೇರ ಅರ್ಜಿಗಳಿಗೆ ಕಡಿವಾಣ: ಕೆಲವು ಅಧಿಕಾರಿಗಳು ಅರ್ಜಿಗಳನ್ನು ಆನ್‌ಲೈನ್ (ಸಕಾಲ)ಮೂಲಕ
ತೆಗೆದುಕೊಳ್ಳದೆ ನೇರವಾಗಿ ಪಡೆಯುತ್ತಿರುವುದು ಹಾಗೂ ಅರ್ಜಿ ವಿಲೇವಾರಿಗೆ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಅರ್ಜಿಗಳನ್ನು ನೇರವಾಗಿ ಪಡೆಯುವಂತಿಲ್ಲ. ಎಲ್ಲ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಪಡೆಯಬೇಕು ಹಾಗೂ ಅರ್ಜಿ ಪಡೆಯುವಾಗಲೇ ದಾಖಲೆಗಳು ಸರ್ಮಪಕ ವಾಗಿವೆಯೇ ಎಂದು ಪರಿಶೀಲಿಸಬೇಕು. ಅರ್ಜಿ ವಿಲೇವಾರಿಗೆ ನಿಗದಿ ಮಾಡಿರುವ ಅವಧಿ ಮುಗಿದ ಸಂದರ್ಭದಲ್ಲಿ ದಾಖಲೆಗಳು ಸರ್ಮಪಕವಾಗಿಲ್ಲ ಎಂದು ನೆಪ ಹೇಳುವಂತಿಲ್ಲ ಎನ್ನುವ ಸೂಚನೆಯನ್ನೂ ನೀಡಲಾಗಿದೆ ಎಂದರು.
ಸಕಾಲ ಯೋಜನೆಯಡಿ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಾರ್ವಜನಿಕರು ಅರ್ಜಿ ಸ್ಥಿತಿಗತಿ ತಿಳಿಯಲು ಬಿಬಿಎಂಪಿ ಸಹಾಯವಾಣಿಗೂ ಕರೆ ಮಾಡಬಹುದು. -ಅನ್ಬುಕುಮಾರ್, ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ)
ಖಾತಾ ವರ್ಗಾವಣೆ ಅರ್ಜಿಗಳೇ ಹೆಚ್ಚು: ಬಿಬಿಎಂಪಿ ವ್ಯಾಪ್ತಿಯಲ್ಲಿ “ಸಕಾಲ’ ಅಡಿ ಖಾತಾ ವರ್ಗಾವಣೆ ಜತೆಗೆ ಖಾತಾ ನೋಂದಣಿ, ವಿಭಜನೆ ಮತ್ತು ಸಂಯೋಜನೆ ಸೇರಿ ಖಾತಾಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಸಲ್ಲಿಕೆಯಾಗುತ್ತಿವೆ. 2018 ಮತ್ತು 2019ನೇ ಸಾಲಿನಲ್ಲಿ ಖಾತಾಗೆ ಸಂಬಂಧಿಸಿ 3,846 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 3,479 ಅರ್ಜಿದಾರರು ಹಣ ಪಾವತಿಸದ ಕಾರಣ ವಿಲೇವಾರಿಯಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
-ಹಿತೇಶ್ ವೈ