Advertisement

ಸಜೀಪಪಡು ಗ್ರಾಮ ಪಂಚಾಯತ್‌ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿ

11:06 PM Mar 03, 2021 | Team Udayavani |

ಬಂಟ್ವಾಳ: ಕಳೆದ ಅವಧಿಯಲ್ಲೇ ಪೂರ್ಣಗೊಂಡು ಉದ್ಘಾಟನೆಗೊಳ್ಳಬೇಕಿದ್ದ 2015ರಲ್ಲಿ ಅಸ್ತಿತ್ವಕ್ಕೆ ಬಂದ ಸಜೀಪಪಡು ಗ್ರಾಮ ಪಂಚಾಯತ್‌ನ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನೂ 10-15 ದಿನಗಳ ಕಾಮಗಾರಿ ನಡೆದು ಮುಂದಿನ ತಿಂಗಳು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.

Advertisement

ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾ ಯತ್‌ಗಳನ್ನು ಪುನರ್‌ ವಿಂಗಡಿಸಲು ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ ನೇತೃತ್ವದ ವರದಿಯ ಆಧಾರದಲ್ಲಿ 2015ರಲ್ಲಿ ಸರಕಾರವು ರಾಜ್ಯದಲ್ಲಿ 439 ಗ್ರಾ.ಪಂ.ಗಳನ್ನು ರಚಿಸಲಾಗಿತ್ತು.

ಅದರಂತೆ ಬಂಟ್ವಾಳ ತಾಲೂಕಿನಲ್ಲಿ 12 ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿದ್ದವು. ಅವುಗಳಲ್ಲಿ ಇರ್ವತ್ತೂರು, ಕಳ್ಳಿಗೆ, ಅಮ್ಮುಂಜೆ, ಅರಳ, ಬೋಳಂತೂರು, ಸಾಲೆತ್ತೂರು, ಬರಿಮಾರು, ಮಣಿ ನಾಲ್ಕೂರು, ಮಾಣಿಲ, ಪೆರಾಜೆ, ನೆಟ್ಲಮುಟ್ನೂರು ಗ್ರಾ.ಪಂ.ಗಳ ಕಟ್ಟಡ ಉದ್ಘಾಟನೆಗೊಂಡಿತ್ತು.

ಜೂನ್‌ನಲ್ಲಿ ಮೇಲ್ಛಾವಣಿ ಪೂರ್ಣ
ಹಲವು ಕಾರಣಗಳಿಂದ ಸಜೀಪಪಡು ಗ್ರಾ.ಪಂ. ಕಟ್ಟಡದ ಕಾಮಗಾರಿಯ ಪ್ರಾರಂ ಭವೇ ವಿಳಂಬವಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ಕಟ್ಟಡದ ಮೇಲ್ಛಾವಣಿಯ ಕಾಮಗಾರಿ ಪೂರ್ಣಗೊಂಡು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಕಾಮಗಾರಿ ಮಾತ್ರ ಬಹಳಷ್ಟು ತಿಂಗಳು ವಿಳಂಬವಾಗಿದೆ.

ಪ್ರತಿ ಗ್ರಾ.ಪಂ.ಗಳ ಆಡಳಿತ ಮಂಡಳಿಗಳು ತಮ್ಮದೇ ಅವಧಿಯಲ್ಲಿ ಹೊಸ ಕಟ್ಟಡ ಉದ್ಘಾಟನೆಗೊಳ್ಳಬೇಕು ಎಂಬ ಯೋಜನೆ ಹಾಕಿದ್ದರೆ, ಸಜೀಪಪಡು ಗ್ರಾ.ಪಂ.ನ ಹಿಂದಿನ ಆಡಳಿತ ಮಂಡಳಿಗೆ ಅದು ಸಾಧ್ಯವಾಗಿರಲಿಲ್ಲ. ಹಲವು ಕಾರಣಗಳಿಂದ ಗೊಂದಲ ಉಂಟಾಗಿ ವಿಳಂಬವಾಗಿತ್ತು. ಜತೆಗೆ ಕಟ್ಟಡದ ಲಿಕೇಜ್‌ ಸಮಸ್ಯೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು. ಇದೀಗ ಹೊಸ ಆಡಳಿತ ಮಂಡಳಿಗೆ ಪ್ರಾರಂಭದಲ್ಲೇ ಹೊಸ ಕಟ್ಟಡ ಉದ್ಘಾಟನೆಯ ಅವಕಾಶ ದೊರಕಿದೆ.

Advertisement

ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರಾ.ಪಂ.ಗಳಿಗೆ ಸರಕಾರವು ತಲಾ 20 ಲಕ್ಷ ರೂ.ಅನುದಾನ ನೀಡಿತ್ತು. ಜತೆಗೆ ನರೇಗಾ, 14ನೇ ಹಣಕಾಸು ಯೋಜನೆ ಸೇರಿ ಒಟ್ಟು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿತ್ತು. ಕೆಲವೊಂದು ಗ್ರಾ.ಪಂ.ಗಳು ಸರಕಾರದ ಅನುದಾನದಿಂದಲೇ ಕಟ್ಟಡ ಪೂರ್ಣಗೊಳಿಸಿದ್ದವು.

10-15 ದಿನಗಳ ಕಾಮಗಾರಿ
ಹೊಸ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಫ್ಲೋರಿಂಗ್‌ನ ಟೈಲ್ಸ್‌ ಕೂಡ ಅಳವಡಿಸಲಾಗಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನು ಸುಮಾರು 10-15 ದಿನಗಳ ಕಾಮಗಾರಿ ಬಾಕಿ ಇದ್ದು, ಉಳಿದಂತೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ.
-ತಾರಾನಾಥ ಸಾಲ್ಯಾನ್‌ ಪಿ., ಎಇಇ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಬಂಟ್ವಾಳ

ಸಭೆಯಲ್ಲಿ ನಿರ್ಧಾರ
ನೂತನ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಉದ್ಘಾಟನೆಗೆ ಸಂಬಂಧಿಸಿದಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ದಿನಾಂಕ ನಿರ್ಧರಿಸಬೇಕಿದೆ ಎಂದು ಅಭಿವೃದ್ಧಿ ಅಧಿಕಾರಿ ಶ್ವೇತಾ ಕೆ.ವಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next