Advertisement
ಕೇರಳದ ವಯನಾಡ್‌ನ ಮಾನಂತವಾಡಿ ಎಂಬ ಹಳ್ಳಿಯ ಪರಿಸರದ ಸಜನಾ ಅವರ ಒಂದೇ ದಿನದ ಆಟ ಆಕೆಯನ್ನು ನಾಯಕಿಯಾಗಿ ಪರಿವರ್ತಿಸಿದೆ. ಸಜನಾ ಅವರ ಆಟವನ್ನು ನೋಡಲು ಕಾತುರತೆಯು ಇಡೀ ನೆರೆಹೊರೆಯವರಿಗೆ ಸಂತೋಷದಾಯಕ ಸಂದರ್ಭವಾಗಿ ಮಾರ್ಪಟ್ಟಿತು. ಅಂತಿಮ-ಚೆಂಡಿನಲ್ಲಿ ಸಿಕ್ಸರ್ ಹೊಡೆದು ಹಾಲಿ ಚಾಂಪಿಯನ್ ಗೆ ರೋಮಾಂಚಕ ನಾಲ್ಕು ವಿಕೆಟ್‌ಗಳ ವಿಜಯ ತಂದಿಟ್ಟಿದ್ದರು.
Related Articles
Advertisement
ಆಕೆಯನ್ನು ಶೀಘ್ರದಲ್ಲೇ ರಾಜ್ಯ ಅಂಡರ್-19 ತಂಡಕ್ಕೆ ಸೇರಿಸಲಾಯಿತು ನಂತರ ನಾಯಕಿಯಾಗಿಯೂ ನೇಮಕಗೊಂಡರು. ಆಲ್‌ರೌಂಡರ್ – ದೊಡ್ಡ ಹೊಡೆತದ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ನರ್ ಆಗಿ ಭಾರತ ಎ ತಂಡಕ್ಕೆಗೆ ಆಯ್ಕೆಯಾದರು.
ಕಳೆದ ವರ್ಷದ ಆರಂಭದಲ್ಲಿ ಮೊದಲ WPL ಹರಾಜನ್ನು ಸಜನಾ ಟಿವಿಯಲ್ಲಿ ನೋಡಲಿಲ್ಲ.ಅಕೆ ಬಿಡ್ ಅನ್ನು ಆಕರ್ಷಿಸಲು ವಿಫಲವಾದಾಗ ಅಸಮಾಧಾನಗೊಂಡಿದ್ದಳು. ಆಕೆಯ ಪ್ರಸ್ತುತ ತರಬೇತುದಾರರಾದ ಕೆ ರಾಜಗೋಪಾಲ್ ಅವರ ಸಮಯೋಚಿತ ಪ್ರೋತ್ಸಾಹಕ ನುಡಿ ಅವರನ್ನು ಪ್ರೇರೇಪಿಸಿತು”ಎಂದು ಸಜೀವನ್ ಹೇಳಿದ್ದಾರೆ.
“ಆ ಹರಾಜಿನ ನಂತರ ನಿರಾಶೆಗೊಳ್ಳಬೇಡ ಎಂದು ನಾನು ಅವಳಿಗೆ ಹೇಳಿದೆ. ಪ್ರದರ್ಶನವನ್ನು ಮುಂದುವರಿಸಿದರೆ, ಅವಕಾಶವು ಖಂಡಿತವಾಗಿಯೂ ನಿನ್ನ ಬಳಿಗೆ ಬರುತ್ತದೆ.ಆಕೆ ಗಟ್ಟಿಮುಟ್ಟಾದ ಹುಡುಗಿ, ಮತ್ತು ಇದು ಆಟದ ಮೇಲೆ ಅವಳ ಗಮನವನ್ನು ಇಟ್ಟುಕೊಳ್ಳುವ ಸಂದರ್ಭವಾಗಿತ್ತು. “2018 ರ ಕೇರಳ ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಯಾವುದೇ ಕ್ರಿಕೆಟ್ ಆಟ ಇಲ್ಲದಿದ್ದಾಗ ಅವಳು ಅದನ್ನು ಮಾಡಿದಳು. ತನ್ನ ಗುರಿಯನ್ನು ಸಾಧಿಸುವ ಬಯಕೆ ಅವಳ ಶಕ್ತಿಯಾಗಿದೆ ”ಎಂದು ಸಜೀವನ್ ಹೇಳಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಹರಾಜು ಕೊಠಡಿಯಿಂದ 15 ಲಕ್ಷ ರೂ.ಗೆ 29 ರ ಹರೆಯದ ಸಜನಾರನ್ನು ಆಯ್ಕೆ ಮಾಡಿಕೊಂಡಾಗ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದ ಹಾಗಾಯಿತು, ಆಕೆಯ ಮೂಲ ಬೆಲೆ 5 ಲಕ್ಷ ರೂ.,ಅವಳು ತುಂಬಾ ಸಂತೋಷವಾಗಿದ್ದಳು. ಅವಳು ತನ್ನ ಎಲ್ಲಾ ಸ್ನೇಹಿತರು ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಲು ಕರೆದಳು. ಲೀಗ್‌ನಲ್ಲಿ ಅತಿ ದೊಡ್ಡ ತಂಡವಾದ ಮುಂಬೈನಿಂದ ಒಪ್ಪಂದ ಪಡೆಯುತ್ತೇನೆ ಎಂದು ತಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಸಂಭ್ರಮ ಹಂಚಿಕೊಂಡಳು ” ಎಂದು ಸಜೀವನ್ ಹೇಳಿದ್ದಾರೆ.
ಬಲಗೈ ಆಟಗಾರ್ತಿ ತನ್ನ WPL ಚೊಚ್ಚಲ ಪಂದ್ಯದಲ್ಲೇ ಛಾಪು ಮೂಡಿಸಿದ್ದು, ಆಫ್-ಸ್ಪಿನ್ನರ್ ಆಲಿಸ್ ಕ್ಯಾಪ್ಸಿ ಎಸೆದ ಚಂಡಿನಲ್ಲಿ ಪಂದ್ಯದ ವಿಜೇತ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು ಐದು ರನ್ ಅಗತ್ಯವಿತ್ತು. ಗೆದ್ದ ಬಳಿಕ ಸಜನಾ ಅವರನ್ನು ಯಸ್ತಿಕಾ ಭಾಟಿಯಾ ಅವರು ‘ಮುಂಬೈ ಇಂಡಿಯನ್ಸ್ ವನಿತಾ ತಂಡದ ಕೈರಾನ್ ಪೊಲಾರ್ಡ್’ ಎಂದು ಕರೆದರು.
“ಸಜನಾ ಶೀಘ್ರದಲ್ಲೇ ಭಾರತೀಯ ಜೆರ್ಸಿಯನ್ನು ಧರಿಸಲು ಬಯಸುತ್ತೇನೆ ಎಂದು ಹೇಳುತ್ತಿದ್ದಾಳೆ. ಆಕೆಯ ಕನಸುಗಳು ನನಸಾಗಲಿ ಎಂದು ಆಶಿಸುತ್ತೇವೆ’ ಎಂದು ಸಜೀವನ್ ಸಂತಸ ಹಂಚಿಕೊಂಡಿದ್ದಾರೆ.