Advertisement

ಸಾಯಿರಾಂ ಭಟ್‌ ಬಡವರಿಗೆ ನೀಡುವ 260ನೇ ಮನೆ ಹಸ್ತಾಂತರ

01:42 AM Jan 23, 2020 | sudhir |

ಬದಿಯಡ್ಕ: ಕೊಡುಗೆ„ದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್‌ ಅವರು ಬಡಜನರಿಗೆ ಉಚಿತವಾಗಿ ನೀಡುವ 260ನೇ ಮನೆಯ ಕೀಲಿಕೈ ಹಾಗೂ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ನೀಡುವ ಹೊಲಿಗೆ ಯಂತ್ರಗಳನ್ನು ಕಾಸರಗೋಡು ಸಂಸದ ರಾಜ್‌ ಮೋಹನ್‌ ಉಣ್ಣಿತ್ತಾನ್‌ ಹಸ್ತಾಂತರಿಸಿದರು.

Advertisement

ಕಿಳಿಂಗಾರು ಸಾಯಿರಾಂ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಅವರು ಮಾತನಾಡಿ ಬಡಜನರ ಜೀವನಕ್ಕೊಂದು ದಾರಿಯನ್ನು ಮಾಡಿಕೊಡುವುದರೊಂದಿಗೆ ಮನೆಯಿಲ್ಲ ದವರಿಗೆ ಮನೆಯನ್ನು ಕಟ್ಟಿಸಿಕೊಡುವ ದೊಡ್ಡ ಮನಸ್ಸು ಇವರದ್ದಾಗಿದೆ. ಇಂತಹ ಜನಪರವಾದ ಕಾರ್ಯಗಳನ್ನು ಮಾಡುವತ್ತ ರಾಜಕೀಯ ಪಕ್ಷಗಳೂ ಚಿಂತಿಸಬೇಕಾಗಿದೆ ಎಂದರು. ಮನೆಯ ಫಲಾನುಭವಿಗಳಾದ ಬೇಳದ ಅಪ್ಪಕುಂಞಿ-ಶಾರದಾ ದಂಪತಿ ಮನೆಯ ಕೀಲಿಕೈಯನ್ನು ಮತ್ತು ಸವಿತಾ ಕಿಳಿಂಗಾರು, ರಮ್ಲ, ಸುನಿತಾ, ವಸಂತಿ, ಮಾಲಿನಿ, ಅಂಜಲಿ, ಚಂದ್ರಿಕಾ ಹೊಲಿಗೆ ಯಂತ್ರಗಳನ್ನು ಪಡೆದುಕೊಂಡರು.

ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಪುತ್ರ ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಗ್ರಾಮ ಪಂಚಾಯತ್‌ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿಕೊಡಬೇಕೆಂದು ಸಂಸದರಲ್ಲಿ ವಿನಂತಿಸಿದರು.

ಸಾಯಿರಾಂ ಗೋಪಾಲಕೃಷ್ಣ ಭಟ್‌, ಶಾರದಾ, ಕೆ.ಎನ್‌. ಶೀಲಾ ಕೃಷ್ಣಭಟ್‌, ಗ್ರಾಮ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಸದಸ್ಯ ಡಿ. ಶಂಕರ, ಡಿ. ಕೃಷ್ಣ, ರವಿ ಮೆಣಸಿನಪಾರೆ, ಬದಿಯಡ್ಕ ಮಂಡಲ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣ, ಪಿ.ಜಿ. ಚಂದ್ರಹಾಸ ರೈ, ಅಬ್ಟಾಸ್‌, ಆನಂದ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆ.ಎನ್‌. ವೇಣುಗೋಪಾಲ ವಂದಿಸಿದರು. ಮಧುರಾ ಕೆ.ಎಸ್‌. ಪ್ರಾರ್ಥನೆ ಹಾಡಿದರು.

Advertisement

ಮಹಿಳೆಯರು ಸ್ವಾವಲಂಬಿಗಳಾಗಲು ನೆರವು
1996ರಿಂದ ಮನೆ ಕಟ್ಟಿಕೊಡಲು ಪ್ರಾರಂಭಿಸಿದ್ದೇವೆ. ಅಂದಿನ ಕಾಲದಲ್ಲಿ ಖರ್ಚಾಗುತ್ತಿದ್ದ ಹಣ ಇಂದು ಸಾಕಾಗುತ್ತಿಲ್ಲ. ಇದರೊಂದಿಗೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ಸಾಗಿಸುವ ಸಲುವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದೇವೆ.
– ಕೆ.ಎನ್‌. ಕೃಷ್ಣ ಭಟ್‌, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next