Advertisement
ಜೀವರಕ್ಷಕ ಸಾಧನ ಕಡ್ಡಾಯಮಲ್ಪೆ ಬೀಚ್ ಮತ್ತು ಬಂದರು ಪ್ರದೇಶದಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರು ಪ್ರವಾಸೀ ಬೋಟ್‌ಗಳಲ್ಲಿ ಪ್ರಯಾಣಿಸುವಾಗ ಜೀವರಕ್ಷಕ ಸಾಧನ ಧರಿಸುವುದು ಕಡ್ಡಾಯ. ಪ್ರವಾಸೀ ಬೋಟ್‌ಗಳಲ್ಲಿ ಸಾಮರ್ಥ್ಯ ಮೀರಿ ಪ್ರವಾಸಿಗರನ್ನು ಕರೆದೊಯ್ದರೆ ಬೋಟ್ ಮಾಲಕರ ಮೇಲೆ ಸಮಿತಿಗೆ ಲಿಖೀತವಾಗಿ ದೂರು ಸಲ್ಲಿಸಬೇಕು.
ಪ್ರವಾಸಿಗರು ಸೈಂಟ್ ಮೇರಿಸ್ ದ್ವೀಪಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊ ಯ್ಯುವುದನ್ನು ನಿಷೇಧಿಸಲಾಗಿದೆ.
ಆಹಾರವನ್ನು ಲೋಹದ ಪಾತ್ರೆ ಗಳಲ್ಲಿ ಒಯ್ಯಬಹುದು. ಆದರೆ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್ ವಸ್ತುಗಳಿಂದ ಕಟ್ಟಿರಕೂಡದು. ಹೆಚ್ಚಿನ ಪಾತ್ರೆಗಳಿದ್ದಲ್ಲಿ ಶುಲ್ಕ ವಸೂಲಿ ಮಾಡಲಾಗುವುದು. ಪ್ರವಾಸಿಗರ ಅನುಕೂಲಕ್ಕಾಗಿ ರಜಾ ದಿನಗಳಲ್ಲಿ ಬೆಳಗ್ಗೆ 6.30ಕ್ಕೆ ಬೋಟ್ ಆರಂಭಿಸಲಾಗುವುದು. ಪ್ರವಾಸೀ ಬೋಟ್‌ಗಳಲ್ಲಿ ಹಾಗೂ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಬಂದಿಗಳಿಂದ ಅಥವಾ ಇತರ ಯಾವುದೇ ಸಮಸ್ಯೆ ಉಂಟಾದಲ್ಲಿ ದೂರು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮಲ್ಪೆ ಅಭಿವೃದ್ಧಿ ಸಮಿತಿಯ ವ್ಯವಸ್ಥಾಪಕರನ್ನು (ದೂರವಾಣಿ 9964024177) ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.