Advertisement
ಪ್ರಕರಣದ ವಿವರಬಂಟ್ವಾಳ ಮಾಣಿಯ 25 ವರ್ಷದ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ವೆನಾÉಕ್ ಆಸ್ಪತ್ರೆಯಲ್ಲಿ ಸದಾನಂದ ನಾಯ್ಕ ಎಂದು ಪರಿಚಯಿಸಿಕೊಂಡಿದ್ದ. “ನಾನು ನಿಮ್ಮ ಜಾತಿಯವನೇ, ನಿನ್ನನ್ನು ಮದುವೆಯಾಗುತ್ತೇನೆ’ ಎಂದು ನಂಬಿಸಿ ಆಕೆಯ ಸ್ನೇಹ ಬೆಳೆಸಿದ್ದ. ಅಲ್ಲದೆ ಯುವತಿಯ ತಾಯಿಯ ಬಳಿ “ನಾನು ಕಾರ್ಕಳದಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು, ನಿಮ್ಮ ಮಗಳನ್ನು ಮದುವೆಯಾಗಲು ಬಯ ಸಿದ್ದೇನೆ’ ಎಂದು ಹೇಳಿದ್ದ. ಅದಕ್ಕೆ ಯುವತಿಯ ತಾಯಿ “ಮನೆಗೆ ಬಂದು ಮಾತನಾಡು’ ಎಂದು ಹೇಳಿದ್ದರು.
Related Articles
ಕೊಲೆ ಘಟನೆ ನಡೆದ ಕೆಲವು ದಿನದ ಬಳಿಕ ಯುವತಿಯ ನೆರೆಮನೆಯ ಯುವಕನ ಮೊಬೈಲಿಗೆ ಕರೆ ಮಾಡಿದ ಮೋಹನ, ಯುವತಿಯ ತಂಗಿಯ ಜತೆ ಮಾತನಾಡಿ “ನಾನು ನಿನ್ನ ಅಕ್ಕ ನನ್ನು ವಿವಾಹವಾಗಿದ್ದು, ಕ್ಷೇಮವಾಗಿದ್ದೇವೆ. ಒಂದು ವಾರದೊಳಗೆ ಬರುತ್ತೇವೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
Advertisement
ಪ್ರಕರಣ ಬೆಳಕಿಗೆ2009 ಅ.26ರಂದು ಬರಿಮಾರು ಯುವತಿಯ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಮೋಹನನು ಮಾಣಿಯ ಯುವತಿಯನ್ನು ಕೊಲೆ ಮಾಡಿದ್ದ ಬಗ್ಗೆ ತಿಳಿಸಿದ್ದ. ಆಗ ಎಎಸ್‌ಪಿಯಾಗಿದ್ದ ಚಂದ್ರಗುಪ್ತ ಅವರು ಆತನ ಹೇಳಿಕೆಗಳನ್ನು ದಾಖಲಿಸಿದ್ದರು. ಪ್ರಕರಣವನ್ನು ಇನ್‌ಸ್ಪೆಕ್ಟರ್ ನಂಜುಂಡೇಗೌಡ ಅವರು ವಿಚಾರಣೆ ನಡೆಸಿ, ಸಿಒಡಿಗೆ ಹಸ್ತಾಂ ತರಿಸಿದ್ದರು. ಸಿಒಡಿಯವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಡಿ. ಟಿ. ಪುಟ್ಟರಂಗ ಸ್ವಾಮಿ ಅವರು 40 ಸಾಕ್ಷಿಗಳ ವಿಚಾರಣೆ ನಡೆಸಿ, 64 ದಾಖಲೆ, 38 ಸಾಕ್ಷ್ಯಗಳನ್ನು ಪರಿಗಣಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್ ಒ. ಎಂ. ಕ್ರಾಸ್ತಾ ವಾದಿಸಿದ್ದರು. ಶಿಕ್ಷೆ ವಿವರ
ಐಪಿಸಿ ಸೆಕ್ಷನ್ 366 (ಅಪಹರಣ)ರಡಿ 6ವರ್ಷ ಕಠಿನ ಸಜೆ 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ತಿಂಗಳ ಸಜೆ, ಸೆಕ್ಷನ್ 302ಯಡಿಯಲ್ಲಿ (ಕೊಲೆ) ಜೀವನಪರ್ಯಂತ ಜೀವಾವಧಿ ಶಿಕ್ಷೆ, ಸೆಕ್ಷನ್ 376ರಡಿ (ಅತ್ಯಾಚಾರ) 7ವರ್ಷ ಕಠಿನ ಸಜೆ, 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸಜೆ, ಸೆಕ್ಷನ್ 328ರಡಿ (ವಿಷ ಉಣಿಸಿದ್ದು)7 ವರ್ಷ ಸಜೆ 3 ಸಾ. ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 201 (ಸಾಕ್ಷಿನಾಶ) 5 ವರ್ಷ ಕಠಿನ ಸಜೆ, 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) 5 ವರ್ಷ ಕಠಿನ ಸಜೆ, 3 ಸಾ. ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 417 (ವಂಚನೆ)ರಡಿ 6 ತಿಂಗಳ ಸಜೆ ವಿಧಿಸಲಾ ಗಿದೆ. ಕೊಲೆಯಾದ ಯುವತಿಯ ಕುಟುಂಬಸ್ಥರು ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.