Advertisement

ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗ: ಭಾರತ ಫೈನಲ್‌ಗೆ

07:00 AM Apr 09, 2018 | Team Udayavani |

ಗೋಲ್ಡ್‌ ಕೋಸ್ಟ್‌: ಬ್ಯಾಡ್ಮಿಂಟನ್‌ ಮಿಶ್ರ ತಂಡ ವಿಭಾಗದಲ್ಲಿ  ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಒಳಗೊಂಡ ಭಾರತ ಫೈನಲ್‌ ಪ್ರವೇಶಿಸಿದೆ. ಭಾರತೀಯರು ಸೆಮಿಫೈನಲ್‌ನಲ್ಲಿ 3-1 ಅಂತರದಿಂದ ಸಿಂಗಾಪುರ ತಂಡವನ್ನು ಸೋಲಿಸಿದರು.

Advertisement

ಇದರೊಂದಿಗೆ ಭಾರತೀಯರು ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. 2014ರಲ್ಲಿ ಗ್ಲಾಸೊYದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕಂಚಿನ ಪದಕ ಹೋರಾಟದಲ್ಲಿ ಸಿಂಗಾಪುರ ವಿರುದ್ಧ ಭಾರತ ಸೋಲು ಕಂಡಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ.

ಅಶ್ವಿ‌ನ್‌ -ಸಾತ್ವಿಕ್‌ ಜೋಡಿ ಮಿಶ್ರ ಸ್ಪರ್ಧೆ ವಿಭಾಗದಲ್ಲಿ 2-0 ಅಂತರದಿಂದ ಗೆದ್ದು ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟಿತು. ಸಿಂಗಲ್ಸ್‌ನಲ್ಲಿ  ಶ್ರೀಕಾಂತ್‌ 21-17, 21-14 ಅಂತರದಿಂದ ಕೇನ್‌ ಯೆವ್‌ ಅವರನ್ನು ಮಣಿಸಿದರು. ಆದರೆ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಸೋಲನುಭವಿಸಿದರು. ಅನಂತರ ಸೈನಾ ನೆಹ್ವಾಲ್‌ ಸಿಂಗಲ್ಸ್‌ನಲ್ಲಿ 21-8, 21-15 ಅಂತರದಿಂದ ಜಿಯಾ ಮಿನ್‌ ಅವರನ್ನು ಸೋಲಿಸಿ ಪಾರಮ್ಯ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next