Advertisement

ಸೈನಾ, ಶ್ರೀಕಾಂತ್‌, ಸಮೀರ್‌, ಪ್ರಣಯ್‌ ಎರಡನೇ ಸುತ್ತಿಗೆ

10:37 AM Sep 21, 2017 | Team Udayavani |

ಟೋಕಿಯೊ (ಜಪಾನ್‌): ಭಾರತೀಯ ಬ್ಯಾಡ್ಮಿಂಟನ್‌ ಪ್ರತಿಭೆಗಳಾದ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌, ಸಮೀರ್‌ ವರ್ಮ, ಎಚ್‌.ಎಸ್‌. ಪ್ರಣಯ್‌ ಅವರು ಜಪಾನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

ಮಹಿಳೆಯರ ಸಿಂಗಲ್ಸ್‌ನಲ್ಲಿ  ಸೈನಾ ನೆಹ್ವಾಲ್‌ 21-17, 21-9 ರಿಂದ ಥಾಯ್ಲೆಂಡ್‌ನ‌ ಪೋರ್ನಪಾವಿ ಚೋಚುವಾಂಗ್‌ ವಿರುದ್ಧ ಜಯ ಸಾಧಿಸಿದರು. ಸೈನಾ ಎರಡನೇ ಸುತ್ತಿನಲ್ಲಿ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ಅವರನ್ನು ಎದುರಿಸಲಿದ್ದಾರೆ. ರಿಯೋ ಒಲಿಂಪಿಕ್ಸ್‌ನ ಚಿನ್ನ ವಿಜೇತೆ ಮರಿನ್‌ ಅವರು ಸೈನಾ ಅವರಿಗೆ ಪ್ರಬಲ ಸವಾಲು ನೀಡಬಹುದು.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 21-15, 12-21, 21-11 ರಿಂದ ಚೀನದ ಟಿಯಾನ್‌ ಹೌ ವೈ ವಿರುದ್ಧ ಗೆಲುವು ಪಡೆದರು. ಮತ್ತೂಂದು ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌ 21-12, 21-14ರಿಂದ ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆಂಟೊನ್ಸನ್‌ ಅವರನ್ನು ಮಣಿಸಿ 2ನೇ ಸುತ್ತಿಗೆ ಪ್ರವೇಶಿಸಿದರು. ಇನ್ನೊಂದು ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮ 21-12, 21-19 ರಿಂದ ಥಾಯ್ಲೆಂಡ್‌ನ‌ ಖೋಸಿಟ್‌ ಫಾತ್‌ಪ್ರದಾದ್‌ ವಿರುದ್ಧ ಗೆಲುವು ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next