Advertisement

ಮಲೇಶ್ಯ ಮಾಸ್ಟರ್ಸ್‌ ದ್ವಿತೀಯ ಸುತ್ತಿಗೆ ಪ್ರವೇಶಿಸಿದ ಸೈನಾ,ಶ್ರೀಕಾಂತ್

12:30 AM Jan 17, 2019 | |

ಕೌಲಾಲಂಪುರ: “ಮಲೇಶ್ಯ ಮಾಸ್ಟರ್ಸ್‌ ವರ್ಲ್ಡ್ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌’ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

Advertisement

ಬುಧವಾರ ನಡೆದ ವನಿತೆಯರ ಸಿಂಗಲ್ಸ್‌ ವಿಭಾಗದಲ್ಲಿ  ಸೈನಾ ನೆಹ್ವಾಲ್‌ ಹಾಂಕಾಂಗ್‌ನ ಡೆಂಗ್‌ ಜಾಯ್‌ ಕ್ಸುವಾನ್‌ ಅವರನ್ನು 14-21, 21-18, 21-18 ಗೇಮ್‌ಗಳಿಂದ ಸೋಲಿಸಿದರು. ಮೊದಲ ಗೇಮ್‌ನಲ್ಲಿ 7 ಅಂಕಗಳ ಹಿನ್ನಡೆ ಅನುಭವಿಸಿದ ಸೈನಾ ಉಳಿದೆರಡು ಗೇಮ್‌ಗಳಲ್ಲಿಯೂ ಅತ್ಯುತ್ತಮ ಆಟವಾಡಿದರು. ದ್ವಿತೀಯ ಸುತ್ತಿನಲ್ಲಿ ಸೈನಾ ಹಾಂಕಾಂಗ್‌ನ ಯಿಪ್‌ ಯುಯಿ ಯಿನ್‌ ಅವರನ್ನು ಎದುರಿಸಲಿದ್ದಾರೆ.

ವನಿತಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿ‌ನಿ ಪೊನ್ನಪ್ಪ-ಸಿಕ್ಕಿ ಎನ್‌ ರೆಡ್ಡಿ ಜೋಡಿ ಹಾಂಕಾಂಗ್‌ನ ನಗ್‌ ತಾಜ್‌ ಯಾವು-ಯುವಿನ್‌ ಸಿನ್‌ ಯಿಂಗ್‌ ಜೋಡಿ ವಿರುದ್ಧ 21-16, 22-20 ನೇರ ಗೇಮ್‌ಗಳಿಂದ ಗೆದ್ದರು.

ಶ್ರೀಕಾಂತ್‌, ಕಶ್ಯಪ್‌ಗೆ ಜಯ
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕೆ. ಶ್ರೀಕಾಂತ್‌ ಹಾಂಕಾಂಗ್‌ನ ನಗ್‌ ಕಾ ಲಾಂಗ್‌ ಅಗುಸ್‌ ಅವರನ್ನು 21-17, 21-11 ನೇರ ಗೇಮ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು. ಮುಂದಿನ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ವಿರುದ್ಧ ಆಡಲಿದ್ದಾರೆ. ಮತ್ತೂಂದು ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್‌ ಡೆನ್ಮಾರ್ಕ್‌ನ ರಾಶ್ಮಸ್‌ ಜೆಮೆR ವಿರುದ್ಧ 19-21, 21-19, 21-19 ಗೇಮ್‌ಗಳಿಂದ ಜಯಿಸಿದರು. ದ್ವಿತೀಯ ಸುತ್ತಿನಲ್ಲಿ ಕಶ್ಯಪ್‌ ಇಂಡೋನೇಶ್ಯದ ಅಥೋನಿ ಸಿನಿಸುಕ ಅವರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸಿದ ಪ್ರಣವ್‌ ಜೆರ್ರಿ ಚೋಪ್ರಾ-ಸಿಕ್ಕಿ ಎನ್‌ ರೆಡ್ಡಿ ಜೋಡಿ ನೆದರ್‌ಲ್ಯಾಂಡ್‌ನ‌ ರಾಬಿನ್‌ ಟ್ಯಾಬ್ಲಿಂಗ್‌-ಸಲೀನಾ ಫೈಕ್‌ ಜೋಡಿ ವಿರುದ್ಧ 19-21, 17-21 ಗೇಮ್‌ಗಳಿಂದ ಪರಭಾವಗೊಂಡು ಟೂರ್ನಿಯಿಂದ ಹೊರನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next