Advertisement

ಕಂಚಿನಲ್ಲೇ ತೃಪ್ತಿ ಪಡೆದ ಸೈನಾ; ತ್ಸು ಯಿಂಗ್‌ ಎದುರು ಹತ್ತನೇ ಸೋಲು

11:49 AM Aug 27, 2018 | Team Udayavani |

ಜಕಾರ್ತ : ಭಾರತದ ಅಗ್ರ ಕ್ರಮಾಂಕದ ಶಟ್ಲ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹವಾಲ್‌ ಇಲ್ಲೀಗ ಸಾಗುತ್ತಿರುವ 18ನೇ ಏಶ್ಯನ್‌ ಗೇಮ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. 

Advertisement

ಚೈನೀಸ್‌ ತೈಪೇ ಯ, ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ ತಾಯ್‌ ತ್ಸು ಯಿಂಗ್‌ ಅವರೆದುರಿನ ಸೆಮಿ ಫೈನಲ್‌ ಪಂದ್ಯದಲ್ಲಿ ನಿರಂತರ ಹತ್ತನೇ ಸೋಲನುಭವಿಸಿದ ಸೈನಾ ನೆಹವಾಲ್‌ಗೆ ಕಂಚಿನ ಪದಕದಲ್ಲೇ ತೃಪ್ತಿ ಪಡುವುದು ಅನಿವಾರ್ಯವಾಯಿತು.  

ನೆಹವಾಲ್‌ ಅವರನ್ನು ತ್ಸು  ಅವರು 21-17, 21-14 ಸೆಟ್ಟುಗಳ  ಅಂತರದಲ್ಲಿ 36 ನಿಮಿಷಗಳ ಬಿರುಸಿನ ಹೋರಾಟದಲ್ಲಿ ಮಣಿಸಿ ಬೆಳ್ಳಿ ಪದಕ ಗೆದ್ದರು. 

ಈ ಮುಖಾಮುಖೀಗೆ ಮುನ್ನ ಸೈನಾ ನೆಹವಾಲ್‌ ಅವರು ತ್ಸು ಯಿಂಗ್‌ ಅವರೆದುರಿನ 9 ಪಂದ್ಯಗಳನ್ನು ಸೋತಿದ್ದರು. ಇವುಗಳಲ್ಲಿ ಮೂರು ಸೋಲುಗಳು ನೆಹವಾಲ್‌ ಗೆ  2018ರ ಋತುವಿನಲ್ಲೇ ಉಂಟಾಗಿರುವುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next