Advertisement

ಡಿಸೆಂಬರ್ ನಲ್ಲಿ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ಮತ್ತು ಕಷ್ಯಪ್ ಮದುವೆ

03:36 PM Sep 26, 2018 | Sharanya Alva |

ಹೈದರಾಬಾದ್: ಬ್ಯಾಡ್ಮಿಂಟನ್ ಸ್ಟಾರ್ಸ್ಸ್ ಸೈನಾ ನೆಹ್ವಾಲ್ ಹಾಗೂ ಪಾರುಪಲ್ಲಿ ಕಷ್ಯಪ್ ಡಿಸೆಂಬರ್ 16ರಂದು ಹಸೆಮಣೆ ಏರಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಕಷ್ಯಪ್ ಡಿ.16ರಂದು ವಿವಾಹ ಕಾರ್ಯಕ್ರಮ ಖಾಸಗಿಯಾಗಿ ನಡೆಯಲಿದ್ದು, ಡಿಸೆಂಬರ್ 21ರಂದು ಗ್ರ್ಯಾಂಡ್ ರಿಸೆಪ್ಶನ್ ನಡೆಯಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸೈನಾ ಹಾಗೂ ಕಷ್ಯಪ್ ಕುಟುಂಬಸ್ಥರು ಮದುವೆ ಬಗ್ಗೆ ಮಾತುಕತೆ ನಡೆಸಿ, ದಿನಾಂಕ ನಿಗದಿಪಡಿಸಿದ್ದಾರೆ. ಡಿ.16ಕ್ಕೆ ಎಲ್ಲಾ ಏರ್ಪಾಡು ನಡೆಯಲಿದೆ ಎಂದು ವರದಿ ವಿವರಿಸಿದೆ.

ಸೈನಾ ಹಾಗೂ ಕಷ್ಯಪ್ ಕಳೆದ ಒಂದು ದಶಕದಿಂದ ಗೆಳೆತನ ಹೊಂದಿದ್ದು, ಇದೀಗ ದಾಂಪತ್ಯಕ್ಕೆ ಕಾಲಿಸಿರುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಲು ನಿರ್ಧರಿಸಿದ್ದಾರೆ. ಇಬ್ಬರು ತಮ್ಮಿಬ್ಬರ ನಡುವಿನ ಡೇಟಿಂಗ್ ಬಗ್ಗೆ ಯಾವತ್ತೂ ತುಟಿ ಬಿಚ್ಚಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಊಹಾಪೋಹಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next