ಪ್ಯಾರಿಸ್: “ಓರ್ಲಿಯನ್ಸ್ ಮಾಸ್ಟರ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಸೆಮಿಫೈನಲ್ ಕಾದಾಟದಲ್ಲಿ ಸೈನಾ ನೆಹ್ವಾಲ್ ಸೋತು ಹೊರಬಿದ್ದಿದ್ದಾರೆ.
ಆದರೆ ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ್-ವಿಷ್ಣುವರ್ಧನ್ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರದ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಡೆನ್ಮಾರ್ಕ್‌ನ ಲೀ ಕ್ರಿಸ್ಟೋಫರ್ಸನ್ ವಿರುದ್ಧ 17-21, 17-21 ನೇರ ಗೇಮ್‌ಗಳಿಂದ ಸೋಲನುಭವಿಸಿದರು.
ಇನ್ನೊಂದೆಡೆ ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ್-ವಿಷ್ಣುವರ್ಧನ್ ಜೋಡಿ ಇಂಗ್ಲೆಂಡ್‌ನ ಕಾಲಮ್ ಹೆಮ್ಮಿಂಗ್-ಸ್ಟೀವನ್ ಸ್ಟಾಲ್‌ವುಡ್ ಅವರನ್ನು 21-17, 21-17 ಗೇಮ್‌ಗಳಿಂದ ಹಿಮ್ಮೆಟಿಸಿ ಅಚ್ಚರಿ ಮೂಡಿಸಿತು.
ಇದನ್ನೂ ಓದಿ :ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಕೋವಿಡ್ ಪಾಸಿಟಿವ್