Advertisement

ಓರ್ಲಿಯನ್ಸ್‌ ಮಾಸ್ಟರ್ ಬ್ಯಾಡ್ಮಿಂಟನ್ : ಸೆಮಿಫೈನಲ್‌ಗೆ ಸೈನಾ ಪ್ರವೇಶ

02:10 AM Mar 27, 2021 | Team Udayavani |

ಪ್ಯಾರಿಸ್: ಅಮೆರಿಕದ ಐರಿಸ್‌ ವಾಂಗ್‌ ಅವರನ್ನು ಮಣಿಸಿದ ಸೈನಾ ನೆಹ್ವಾಲ್‌ “ಓರ್ಲಿಯನ್ಸ್‌ ಮಾಸ್ಟರ್ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಸೆಮಿಫೈನಲ್‌ಗೆ ಮುನ್ನುಗ್ಗಿದ್ದಾರೆ.

Advertisement

ಶುಕ್ರವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ 21-19, 17-21, 21-19 ಅಂತರದ ಗೆಲುವು ಸಾಧಿಸಿದರು. ಇದು ಎರಡು ವರ್ಷಗಳಲ್ಲಿ ಸೈನಾ ಕಾಣುತ್ತಿರುವ ಮೊದಲ ಸೆಮಿಫೈನಲ್‌ ಆಗಿದೆ.

ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಜೋಡಿ ಕೂಡ ಸೆಮಿಫೈನಲ್‌ ತಲುಪಿದೆ. ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್‌ ಗರಗ್‌-ವಿಷ್ಣುವರ್ಧನ್‌ ಉಪಾಂತ್ಯಕ್ಕೆ ಏರಿದ್ದು ಅಚ್ಚರಿಯ ಸಾಧನೆ ಎನಿಸಿದೆ. ಆದರೆ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಅವರ ಆಟ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next