Advertisement

ಸೈನಾಗೆ ಮತ್ತೂಂದು ಒಲಿಂಪಿಕ್ಸ್‌ ಆಯೋಗ ಪ್ರತಿನಿಧಿಸುವ ಗೌರವ

11:10 AM Mar 01, 2017 | Harsha Rao |

ಹೈದರಾಬಾದ್‌: ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಮತ್ತೂಂದು ಹಿರಿಮೆಗೆ ಪಾತ್ರರಾಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟದಲ್ಲಿ ಒಲಿಂಪಿಕ್ಸ್‌ ಆ್ಯತ್ಲೆಟಿಕ್ಸ್‌ ಆಯೋಗ ವನ್ನು ಪ್ರತಿನಿಧಿಸುವ ಗೌರವವನ್ನು ಪಡೆದು ಕೊಂಡಿದ್ದಾರೆ. ಈ ವಿಷಯವನ್ನು ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ ಖಚಿತಪಡಿಸಿದೆ.

Advertisement

ಸೈನಾ ಕಳೆದ ವರ್ಷವಷ್ಟೇ ಒಲಿಂಪಿಕ್ಸ್‌ ಆ್ಯತ್ಲೆಟಿಕ್ಸ್‌ ಆಯೋಗದ ಪ್ರತಿನಿಧಿಯಾಗಿ ಆಯ್ಕೆ ಯಾಗಿದ್ದರು. ಆದರೆ ರಿಯೋ ಒಲಿಂಪಿಕ್ಸ್‌ ವೇಳೆ ಗಾಯದ ಕಾರಣದಿಂದ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಬಳಿಕ ಚೇತರಿಸಿಕೊಂಡ ಅವರು ಮಲೇಶ್ಯ ಗ್ರ್ಯಾನ್‌ ಪ್ರೀ ಗೋಲ್ಡ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದರು.  

ಸದ್ಯ ಸೈನಾ ನೆಹ್ವಾಲ್‌ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ 10ನೇ ರ್‍ಯಾಂಕಿಂಗ್‌ನಲ್ಲಿದ್ದಾರೆ. ಮುಂದಿನ ಆಲ್‌ ಇಂಗ್ಲೆಂಡ್‌ ಕೂಟವನ್ನು ಎದುರು ನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next