Advertisement

2 ದಶಕದಲ್ಲೇ ಮೊದಲ ಸಾಧನೆ:ಚಾನುಗೆ ವಿಶ್ವ ವೇಟ್‌ ಲಿಫ್ಟಿಂಗ್‌ ಕಿರೀಟ

04:55 PM Nov 30, 2017 | udayavani editorial |

ಹೊಸದಿಲ್ಲಿ : ಅಮೆರಿಕದ ಆ್ಯನ್‌ಹೀಮ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪ್ಯನ್‌ಶಿಪ್‌ನಲ್ಲಿ ಭಾರತದ ಮಿರಾಬಾಯಿ ಚಾನು ಅವರು ಕಳೆದ ಎರಡು ದಶಕಗಳಲ್ಲೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಮೊತ್ತ ಮೊದಲ ಭಾರತೀಯಳೆಂಬ ಅತ್ಯಪೂರ್ವ ಸಾಧನೆಯನ್ನು ಇಂದು ಗುರುವಾರ ಮಾಡಿದ್ದಾರೆ.

Advertisement

ಈ ಸಾಧನೆಯ ಮೂಲಕ ಮೀರಾಬಾಯಿ ಅವರು ರಯೋ ಒಲಿಂಪಿಕ್ಸ್‌ನಲ್ಲಿನ ತನ್ನ ವೈಫ‌ಲ್ಯವನ್ನು ಮರೆಯುವಂತೆಯೂ ಮಾಡಿದ್ದಾರೆ.

ಭಾರತೀಯ ರೈಲ್ವೇಸ್‌ ನಲ್ಲಿ ಉದ್ಯೋಗಿಯಾಗಿರುವ ಚಾನು, ಮಹಿಳೆಯರ 48 ಕೆಜಿ ವಿಭಾಗದಲ್ಲಿ  ಸ್ನ್ಯಾಚ್‌ ನಲ್ಲಿ 85 ಕೆಜಿ ಮತ್ತು ಕ್ಲೀನ್‌ ಆ್ಯಂಡ್‌ ಜರ್ಕ್‌ ನಲ್ಲಿ ಒಟ್ಟು 194 ಕೆಜಿ ಭಾರ ಎತ್ತುವ ಸಾಧನೆ ಮಾಡಿ ಚಿನ್ನದ ಪದಕ ಗೆಲ್ಲುವ ಸಾಧನೆ ಮಾಡಿದರು. ಆ ಮೂಲಕ ಆಕೆ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.

November 30, 2017

Advertisement

ತ್ರಿವರ್ಣ ಧ್ವಜ ಹಾರುವುದನ್ನು ಪೋಡಿಯಂ ನಿಂದ ಕಂಡ ಚಾನು ಅವರ ಕಣ್ಣುಗಳು ತುಂಬಿ ಬಂದವು. ಮಾರ್ಕ್‌ವೀ ಈವೆಂಟ್‌ನಲ್ಲಿ ಭಾರತೀಯಳಾಗಿ ಅತ್ಯಪರೂಪದ ಗೌರವ ಪಡೆದ ಸಾಧನೆ ಚಾನು ಅವರದ್ದಾಗಿದೆ.

ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ ಅವರು 1994 ಮತ್ತು 1995ರಲ್ಲಿ ಎರಡು ಬಾರಿ ವಿಶ್ವದ ಈ ಅತ್ಯುನ್ನತ ಬಹುಮಾನವನ್ನು ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next