Advertisement

ಮಹಾತ್ಮರ ದಾರಿಯಲ್ಲಿ ಸಾಗೋರು ಎಡಪಂಥೀಯರೇ: ಚಂಪಾ

01:09 PM Oct 23, 2017 | |

ಮೈಸೂರು: ಬಸವಣ್ಣ, ಬುದ್ಧ, ಅಂಬೇಡ್ಕರ್‌ ದಾರಿಯಲ್ಲಿ ಸಾಗುವ ಪ್ರತಿಯೊಬ್ಬರೂ ಎಡಪಂಥಿಯರೇ ಆಗಿದ್ದು, ಇದೇ ದಾರಿಯಲ್ಲಿ ಸಾಗುವ ಮಲೆಯೂರು ಗುರುಸ್ವಾಮಿ ಅವರು ಎಡಪಂಥಿಯರೆಂದು ಹೇಳಿಕೊಳ್ಳಲು ಭಯಪಡಬೇಕಿಲ್ಲ ಎಂದು 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಾಹಿತಿ ಪೊ›.ಚಂದ್ರಶೇಖರ್‌ ಪಾಟೀಲ್‌ ಹೇಳಿದರು.

Advertisement

ನಗರದ ಕಲಾಮಂದಿರದಲ್ಲಿ ಭಾನುವಾರ ಮಲೆಯೂರು ಗುರುಸ್ವಾಮಿ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಲೆಯೂರು ಗುರುಸ್ವಾಮಿ ಅವರೊಂದಿಗೆ ಒಂದು ದಿನ ಮಲೆಯೂರು ನಮ್ಮವರು, ಮಗು-70 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಕೆಲವು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅನೇಕ ಪ್ರಬೇಧಗಳು ಹುಟ್ಟಿಕೊಂಡಿವೆ. ಇದರಿಂದಾಗಿ ಸಮಾಜ ಜಡತ್ವದಿಂದ ಕೂಡಿದ್ದು, ಇವುಗಳಿಂದ ಯಾವುದೇ ಬದಲಾವಣೆ ಬಯಸದವರು ಬಲಪಂಥಿಯರಾಗಿದ್ದಾರೆ. ಸಮಾಜದಲ್ಲಿ ನಿರಂತರವಾಗಿ  ಹೋರಾಟ ನಡೆಸುವ ಮೂಲಕ ಪ್ರಗತಿಪರರಾಗಿ ಗುರುತಿಸಿಕೊಂಡವರೆಲ್ಲರೂ ಎಡಪಂಥಿಯರಾಗಿ ಗುರುತಿಸಿಕೊಳ್ಳಲಿದ್ದಾರೆಂದರು. 

ಶಾಸಕ ವಾಸು ಮಾತನಾಡಿ, ಗುರುಸ್ವಾಮಿ ಅವರು ಲೋಕಪ್ರಜ್ಞೆ ಮೂಡಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಮೂಡಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಮಾಡಿದ್ದಾರೆಂದರು.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೊರತುಪಡಿಸಿದರೆ 100 ವರ್ಷ ದಾಟಿದ ಹೆಚ್ಚಿನವರು ತಮ್ಮನ್ನು ಗುರುತಿಸಿಕೊಳ್ಳುವಂತಹ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ಗುರುಸ್ವಾಮಿ ಅವರು ನೂರು ವರ್ಷ ಪೂರೈಸಿ ಇಂತಹ ಸಾಧನೆಗೆ ಪಾತ್ರವಾಗಲಿ ಎಂದರು.

Advertisement

ಸಚಿವೆ ಎಂ.ಸಿ.ಮೋಹನಕುಮಾರಿ, ಮಲೆಯೂರು ಗುರುಸ್ವಾಮಿ ಅವರ ಮಾತುಗಳು ಅನುಭವ ಹೂರಣವಾಗಿದ್ದು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಅವರ ಕೊಡುಗೆ ಶ್ರೇಷ್ಠ. ಗುರುಸ್ವಾಮಿಯವರನ್ನು ಬಹಳ ವರ್ಷಗಳಿಂದ ಬಲ್ಲವಳಾಗಿದ್ದು, ನಮ್ಮೂರಿನವರೇ ಆದ ಗುರುಸ್ವಾಮಿ ಅವರನ್ನು ಅಭಿನಂದಿಸುತ್ತಿರುವುದು ಸಂತಸದ ತಂದಿದೆ ಎಂದರು.

ಕ್ಷೇತ್ರದ ಅಭಿವೃದ್ಧಿ ಹಾಗೂ ರಾಜಕೀಯ, ಸಾಮಾಜಿಕ ಚಿಂತನೆಗಳಲ್ಲಿ ಪತಿ ಮಹದೇವಪ್ರಸಾದ್‌ ಜತೆಗೂಡುತ್ತಿದ್ದ ಮಲೆಯೂರು ಗುರುಸ್ವಾಮಿ ತಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಂತಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಡಾ.ಮಹದೇವಸ್ವಾಮಿ ಹಗ್ಗೊàಠಾರ ರಚಿಸಿರುವ ಮಲೆಯೂರು ಗುರುಸ್ವಾಮಿ ಬದುಕು-ಬರಹ ಕೃತಿಯನ್ನು ಶಾಸಕ ವಾಸು  ಬಿಡುಗಡೆಗೊಳಿಸಿದರು. 

ಹೊಸಮಠದ ಚಿದಾನಂದ ಸ್ವಾಮೀಜಿ, ವಾಟಾಳುವಿನ ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಮರಿಮಲ್ಲಪ್ಪ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎಚ್‌.ಎಂ.ಪೃಥ್ವಿರಾಜ್‌, ಅಭಿನಂದನಾ ಸಮಿತಿ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಸಮಿತಿ ಕಾರ್ಯದರ್ಶಿ ಚಿನ್ನಸ್ವಾಮಿ ವಡ್ಡಗೆರೆ, ಸಂಚಾಲಕರಾದ ಎಸ್‌.ಶಿವಮೂರ್ತಿಕಾನ್ಯ, ಚಂದ್ರಶೇಖರ್‌, ಡಾ.ನಂದೀಶ್‌ ಹಂಚೆ, ಖಜಾಂಚಿ ಡಿ.ಎನ್‌.ಲೋಕಪ್ಪ, ಪೊ›.ಕೆ.ಎಸ್‌.ಭಗವಾನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next