ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿಖಾನ್ ಸೋಮವಾರ(ಜ.22 ರಂದು) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಅವರು, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ಇಂಡಿಯಾ.ಕಾಮ್ ವರದಿ ಮಾಡಿದೆ.
ಸೈಫ್ ಅಲಿಖಾನ್ ಅವರ ಭುಜ ಹಾಗೂ ಮೊಣಕಾಲಿಗೆ ಏಟಾಗಿದ್ದು, ಈ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಗುಣಮುಖವಾಗಲು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಪ್ರಾಣ ಪ್ರತಿಷ್ಠಾ ದಿನವೇ ಪ್ಯಾನ್ ಇಂಡಿಯಾ ʼSHREE RAM, JAI HANUMANʼ ಫಸ್ಟ್ ಲುಕ್ ಔಟ್
ಸೈಫ್ ಅಲಿ ಖಾನ್ ಅವರೊಂದಿಗೆ ಪತ್ನಿ ಕರೀನಾ ಕಪೂರ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಹೇಗೆ ಸೈಫ್ ಅವರ ಭುಜ ಹಾಗೂ ಮೊಣಕಾಲಿಗೆ ಪೆಟ್ಟಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಆದಾಗ್ಯೂ, ಸೈಫ್ ಅವರ ತಂಡವು ವರದಿಗಳ ಈ ಇನ್ನು ಕೂಡ ಯಾವ ಸ್ಪಷ್ಟನೆಯನ್ನು ನೀಡಿಲ್ಲ.
ಸೈಫ್ ದಂಪತಿ ತನ್ನ ಮಕ್ಕಳೊಂದಿಗೆ ಇತ್ತೀಚೆಗಷ್ಟೇ ಸ್ವಿಟ್ಜರ್ಲೆಂಡ್‌ಗೆ ಪ್ರವಾಸ ಕೈಗೊಂಡು ವಾಪಾಸಾಗಿದ್ದರು.