Advertisement

ಶೇ.90 ಶೌಚಾಲಯ ಬಳಕೆ

01:29 PM Mar 21, 2020 | Naveen |

ಸೈದಾಪುರ: ಪಟ್ಟಣದಲ್ಲಿ ಶೇ. 90ರಷ್ಟು ಶೌಚಾಲಯ ಬಳಕೆಯಾಗುತ್ತಿರುವುದು ಗಮನಾರ್ಹವಾಗಿದೆ. ವ್ಯಾಪಾರ ಮತ್ತು ಶೈಕ್ಷಣಿಕ ಕೇಂದ್ರವಾಗಿರುವುದರಿಂದ ಸಂಘ ಸಂಸ್ಥೆಗಳ ಸ್ವಚ್ಛತೆ ಜಾಗೃತಿ ಮತ್ತು ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳ ಪರಿಶ್ರಮದಿಂದ ಇಲ್ಲಿನ ಜನರು ಸರ್ಕಾರದ ಸಹಾಯಧನ ಮತ್ತು ವೈಯಕ್ತಿಕ ಕಾಳಜಿಯಿಂದ ಶೌಚಾಲಯ ನಿರ್ಮಿಸಿಕೊಂಡು ಬಳಸುತ್ತಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಕುಟುಂಬಗಳಿಗೆ ಸ್ಥಳದ ಕೊರತೆ ಇದೆ. ಹಾಗಾಗಿ ಶೌಚಕ್ಕೆ ಬಯಲಿಗೆ ಹೋಗುವುದು ಅನಿವಾರ್ಯವಾಗಿದೆ.

Advertisement

ಪಟ್ಟಣದಲ್ಲಿ ಸುಮಾರು 1000 ಕಟುಂಬಗಳಿವೆ. ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಗ್ರಾಪಂ ಸದಸ್ಯರ ಕಾಳಜಿಯಿಂದ ಪಟ್ಟಣದಲ್ಲಿ ಒಟ್ಟು 908 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ. ನಿರ್ಮಾಣ ಮತ್ತು ಬಳಕೆಯಾಗುತ್ತಿರುವದರಿಂದ ಪಟ್ಟಣವನ್ನು ಕೆಲವು ದಿನಗಳಲ್ಲಿ ಬಯಲು ಮುಕ್ತ ಪಟ್ಟಣವಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಸಮುದಾಯ ಶೌಚಾಲಯ ಅವಶ್ಯ
ಪಟ್ಟಣಕ್ಕೆ ದಿನನಿತ್ಯ ವ್ಯಾಪಾರ ಮತ್ತು ಶಿಕ್ಷಣಕ್ಕೆ ಸಾವಿರಾರೂ ಜನರು ಮತ್ತು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಇಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲ. ಇದರಿಂದ ಬಯಲಿಗೆ ತೆರಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರು ಗಮನಹರಿಸಿ ಸೂಕ್ತ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಟ್ಟಾಗ ಬಯಲು ಮುಕ್ತ ಪಟ್ಟಣವಾಗಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಬಯಲು ಶೌಚ ಮುಕ್ತ ದೇಶವಾಗಿಸಲು ಸ್ವತ್ಛ ಭಾರತ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು 12, 000 ರೂ. ಸಹಾಯ ಧನ ನೀಡುತ್ತಿದೆ. ಜನರು ಕಾಳಜಿಯಿಂದ ಉತ್ತಮ ಶೌಚಾಲಯ ನಿರ್ಮಿಸಿಕೊಂಡು ಬಳಸುತ್ತಿದ್ದಾರೆ. ಇನ್ನೂ ಕೆಲವರು ಶೌಚಕ್ಕೆ ಬಯಲಿಗೆ ಹೋಗುತ್ತಿರುವುದು ಕಂಡು ಬಂದಿದೆ. ಅವರ ಕುಟುಂಬದ ಸದಸ್ಯರಿಗೆ ಸ್ವಚ್ಛತೆ ಬಗ್ಗೆ ಅರಿವು ನೀಡಿ ಶೌಚಾಲಯ ನಿರ್ಮಾಣ ಮತ್ತು ಬಳಸುವಂತೆ ಮಾಡುತ್ತೇವೆ.

ಶರಣಮ್ಮ ಹಣಮಂತ
ವಡವಟ್‌, ಗ್ರಾಪಂ ಸದಸ್ಯೆ

Advertisement

2013-14ಕ್ಕೆ ಹೋಲಿಸಿದರೆ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ ಮಾಡುವುದರಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಇಲ್ಲಿನ ಜನರು ಸ್ವತ್ಛತೆ ಬಗ್ಗೆ ಅರಿವು ಇರುವುದರಿಂದ ನಮ್ಮ ಕಾರ್ಯ ಸುಲಭವಾಗಿ ಮುಗಿದಿದೆ. ಮುಂದಿನ ದಿನಗಳಲ್ಲಿ ಜನರ ಮತ್ತು ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಬಯಲು ಮುಕ್ತ ಪಟ್ಟಣ ಮಾಡುವ ಗುರಿ ಹೊಂದಿದ್ದು, 2019-20ನೇ ಸಾಲಿಗೆ ಅನೇಕ ಅರ್ಜಿಗಳು ಬಂದಿವೆ. ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಲು ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡಲಾಗುವುದು.
ಶಂಕ್ರಪ್ಪ ,
ಗ್ರಾಪಂ ಅಭಿವೃದ್ಧಿ ಅಧಿಕಾರಿ
ಸೈದಾಪುರ

ಭೀಮಣ್ಣ ಬಿ. ವಡವಟ್‌

Advertisement

Udayavani is now on Telegram. Click here to join our channel and stay updated with the latest news.

Next