Advertisement
ಕಾರ್ಯಕ್ರಮದಲ್ಲಿ ಯು.ಎ.ಇ ಎಕ್ಸ್ ಚೇಂಜ್‌ನ ಅಧ್ಯಕ್ಷ, ಸಂಘಟಕ ಸಮಿತಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆರ್ಶೀವಚನ ನೀಡಿ, ನಾಡಿನ ಪೌರಾವಳಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರಿಗೆ ನೀಡುವ ಸಮ್ಮಾನ ಪದ್ಮಶ್ರೀ ಪುರಸ್ಕಾರಕ್ಕೆ ಸಮಾನವಾಗಿದೆ. ದೇವರು ಮುನಿದರೆ ಮನೆ ದೇವರು ಮುನಿದಂತೆ ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ನಮಗೆ ಯಾವುದೇ ಗೌರವಗಳು ಸಿಕ್ಕಿ ಪ್ರಯೋಜನವಿಲ್ಲ. ಮನೆಯಲ್ಲಿ ನೆಮ್ಮದಿ ಸಿಕ್ಕಿ ಸಮಾಜದಲ್ಲಿ ಗೌರವ ಸಿಕ್ಕಿದರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು. ಸಾಯಿರಾಂ ಗೋಪಾಲಕೃಷ್ಣ ಭಟ್ ನಿರ್ಮಿಸಿದ 250ನೇ ಮನೆಯ ಕೀಲಿ ಕೈಯನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ನೀರ್ಚಾಲು ನಿವಾಸಿ ಲೀಲಾವತಿ ಅವರಿಗೆ ಹಸ್ತಾಂತರಿಸಿದರು.
ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಕುರಿತು ಎ.ಬಿ. ಕುಟ್ಟಿಯಾನ ರಚಿಸಿದ ಪುಸ್ತಕವನ್ನು ಖ್ಯಾತ ವಾಗ್ಮಿ ಎಂ.ಪಿ. ಅಬ್ದುಸ್ಸಮದ್ ಸಮದಾನಿ ಬಿಡುಗಡೆಗೊಳಿಸಿ ಪ್ರಧಾನ ಭಾಷಣ ಮಾಡಿದರು. ಸಾಯಿರಾಂ ಭಟ್ಟರ ಪರಿಚಯವನ್ನು ಸಂಘಟಕ ಸಮಿತಿ ಕಾರ್ಯಾಧ್ಯಕ್ಷ ಪ್ರೊ| ಶ್ರೀನಾಥ್ ಹಾಗೂ ಪುಸ್ತಕ ಪರಿಚಯವನ್ನು ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ. ಆಶ್ರಫ್ ಮಾಡಿದರು. ಫಾ| ರಾಜು ಫಿಲಿಫ್ ಸಕರಿಯಾ ಭಾಷಣ ಮಾಡಿದರು. ಪ್ರಪಂಚಕ್ಕೇ ಸಾಯಿರಾಂ ಭಟ್ಟರು ಮಾದರಿ
ಪ್ರಸ್ತುತ ಕಾಲಘಟ್ಟದಲ್ಲಿ ನಿರುದ್ಯೋಗ, ಅನಕ್ಷರತೆಯದಲ್ಲ ಪ್ರಧಾನ ಸಮಸ್ಯೆ. ಅದು ಸ್ನೇಹಶೂನ್ಯತೆಯೇ ಸಮಸ್ಯೆಯಾಗಿರುವುದಾಗಿ ಎಂ.ಪಿ. ಅಬ್ದುಸ್ಸಮದ್ ಸಮದಾನಿ ಹೇಳಿದರು. ಹೆತ್ತವರೊಂದಿಗೆ, ಅಧ್ಯಾಪಕರೊಂದಿಗೆ ಸ್ನೇಹವಿಲ್ಲ, ತಂದೆ-ತಾಯಿಗಳನ್ನು ಅನಾಥಾಶ್ರಮಗಳಿಗೆ ಸೇರಿಸುವ ಕಾಲವಾಗಿದೆ. ಇನ್ನೋರ್ವರ ಕ್ಷೇಮಕ್ಕಾಗಿಯೇ ದುಡಿಯುವುದನ್ನೇ ನಾವು ಧರ್ಮ ಎಂದು ಕರೆಯುವುದು. ಸಾಯಿರಾಂ ಗೋಪಾಲಭಟ್ಟರ ಜೀವನವೇ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಈ ಕಾಲಘಟ್ಟದಲ್ಲಿಯೇ ಕರುಣೆ ತೋರಬೇಕು. ಒಳ್ಳೆಯದನ್ನೇ ಮಾಡಬೇಕು. ನಮ್ಮ ನಿತ್ಯ ಜೀವನದ ಓಡಾಟದಲ್ಲಿ ಮಾಡುವಂತಹ ಇಂತಹ ಒಳ್ಳೆಯ ಕೆಲಸಗಳೇ ನಮ್ಮ ಬಾಳಿನ ಕೊನೆಯಲ್ಲಿ ನೆನಪಿಸಿಕೊಳ್ಳುವಂತಾಗಿರುವುದು ಎಂದರು.
Related Articles
ವೇದಿಕೆಯಲ್ಲಿ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಾಜಿ ಸಚಿವ ಚೆರ್ಕಳ ಅಬ್ದುಲ್ಲ, ಸಿ.ಟಿ. ಅಹಮ್ಮದಾಲಿ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಮಾಜಿ ಶಾಸಕ ಯೋಗೀಶ್ ಭಟ್, ಪ್ರದೀಪ ಕುಮಾರ ಕಲ್ಕೂರ, ಎಂ.ಬಿ. ಪುರಾಣಿಕ್, ತಿರುಪತಿ ಭಟ್, ಹರೀಶ್ ನಾರಂಪಾಡಿ, ಶಂಕರ ಸಾರಡ್ಕ, ಪ್ರಭಾಕರ ಕಲ್ಲೂರಾಯ ಬೆಳ್ಳೂರು, ಎ. ಅರ್. ಸುಬ್ಬಯ್ಯ ಕಟ್ಟೆ, ಅನ್ವರ್ ಓಝೊàನ್, ಶ್ಯಾಮ ಪ್ರಸಾದ್ ಮಾನ್ಯ, ಎಂ. ಚಂದ್ರಪ್ರಕಾಶ್, ಆಯಿಷಾ ಪೆರ್ಲ, ರವಿ ನಾಯ್ಕಪು, ಪಿ.ಕೆ. ಮುಹಮ್ಮದ್, ಟಿ.ಎ ಶಾಫಿ, ಚಂದ್ರಹಾಸ ರೈ, ಪಿ.ಎಸ್. ಪುಣಿಂಚತ್ತಾಯ, ಧ. ಗ್ರಾ ಯೋಜನೆಯ ಚೇತನ, ಧನಂಜಯ, ಜಯಶ್ರೀ, ಪ್ರಸನ್ನ, ವಿದ್ಯಾಗಣೇಶ್, ರಾಧಾಕೃಷ್ಣ ಉಳಿಯತ್ತಡ್ಕ, ಸುಂದರ ಬಾರಡ್ಕ, ಸುಧಾ ಜಯರಾಮ್, ಕುಂಜಾರು ಮುಹಮ್ಮದ್, ಅಬ್ಬುಲ್ ರಹಿಮಾನ್ ಅನ್ನಡ್ಕ, ಅಶ್ರಫ್ ಮುನಿಯೂರು, ಎ.ಪಿ ಉಮ್ಮರ್, ಡಿ. ಶಂಕರ, ಬದ್ರುದ್ದೀನ್ ತಾಶೀಮ್, ಜಗನ್ನಾಥ ಶೆಟ್ಟಿ, ಎ.ಪಿ. ಉಮ್ಮರ್, ಅಶ್ರಫ್ ಬೆದ್ರಂಪಳ್ಳ, ವಸಂತ ಬಾರಡ್ಕ, ಶಂಕರ್, ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ರತ್ನಾಕರ ಎಸ್. ಓಡಂಗಲ್ಲು ಪ್ರಾರ್ಥನೆ ಹಾಡಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಮಾಹಿನ್ ಕೇಳ್ಳೋಟ್ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ನಿರಂಜನ ರೈ ಮಾಸ್ತರ್ ವಂದಿಸಿದರು.
Advertisement
ಆಶ್ರಯ ಯೋಜನೆಗೆ ಭಟ್ಟರೇ ಪ್ರೇರಣೆ
ಸಾಯಿರಾಂ ಗೋಪಾಲಕೃಷ್ಣ ಭಟ್ ಕಾಶಿಗೆ ತೆರಳಲು ಸಂಗ್ರಹಿಸಿದ ಹಣವನ್ನು ಬಡವರಿಗೆ ಮನೆ ನಿರ್ಮಿಸಲು ನೀಡಿದವರು. ತನ್ನ ಶ್ರೇಯಸ್ಸಿಗಿಂತ ಸಮಾಜದಲ್ಲಿರುವ ದೀನರ ಶ್ರೇಯಸ್ಸು ದೊಡ್ಡದು ಎಂಬುದಾಗಿ ಕಂಡು ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟಿದ್ದರಿಂದ ಅವರ ಭಕ್ತಿಗೆ ಭಗವಂತನು ಮೆಚ್ಚಿಕೊಂಡು ಕಾಶಿ ಯಾತ್ರೆ ಕೈಗೊಳ್ಳದೆ ಅವರಿಗೆ ಶಿವಪರಮಾತ್ಮನ ದರ್ಶನವಾಯಿತು ಇದರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಮಾಡುವಂತಾಯಿತು. ಮುಂದಿನ ದಿನಗಳಲ್ಲಿ ಅದು ಮುಂದುವರಿಯಲಿ. ಶ್ರೀ ಕ್ಷೇತ್ರ ಕೊಂಡೆಯೂರಿನಲ್ಲಿ ಪ್ರಾರಂಭಿಸಿದ ಅಶ್ರಯ ಯೋಜನೆಗೆ ಪ್ರೇರಣೆ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಆಶಯವಾಗಿದೆ. ಅಲ್ಲದೆ ಈಗಾಗಲೇ 27 ಮನೆಗಳನ್ನು ಅರ್ಹರಿಗೆ ಹಸ್ತಾಂತರಿಸಿ ಆಗಿದೆ ಎಂದು ಕೊಂಡೆವೂರು ಶ್ರೀಗಳು ಹೇಳಿದರು. ಚಿತ್ರ: ಫೋಕ್ಸ್ ಸ್ಟಾರ್ ಸ್ಟುಡಿಯೋ ಬದಿಯಡ್ಕ