Advertisement

ರಿಲೀಸ್ ಗೂ ಮುನ್ನ 300 ಕೋಟಿಗಳಿಸಿದ ಸಾಹೋ?

12:32 PM Aug 15, 2019 | Suhan S |

ನವದೆಹೆಲಿ: ತಮಿಳು, ಹಿಂದಿ ಹಾಗೂ ತಮಿಳು ಅವತರಣಿಕೆಯಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಬಿಗ್ ಬಜೆಟ್ ಚಿತ್ರ “ಸಾಹೋ”. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಾಹೋ ಚಿತ್ರಕ್ಕೆ ಲಕ್ಷಾಂತರ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Advertisement

ಭಾರತೀಯ ಚಿತ್ರರಂಗದ ದುಬಾರಿ ಚಿತ್ರಗಳಲ್ಲಿ ಒಂದಾಗಿರುವ ಸಾಹೋ ಚಿತ್ರ 350 ಕೋಟಿ ವೆಚ್ಚದಲ್ಲಿ ಆಸ್ಟ್ರೀಯ,ಹೈದಾರಬಾದ್,ಮುಂಬಯಿ ಸೇರಿದಂತೆ ಅಬುಧಾಬಿ ರೋಮೆನೀಯಾ ಹಾಗೂ ಇತರ ಪ್ರಮುಖ ಯುರೋಪ್ ತಾಣಗಳಲ್ಲಿ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಗಳನ್ನು ಚಿತ್ರೀರಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸಾಹೋ ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮೊತ್ತವನ್ನುಗಳಿಸಿಕೊಂಡಿದೆ ಎಂದು ತಿಳಿಸಿದೆ. ಎಲ್ಲಾ ಭಾಷೆಯ ಥಿಯೇಟರ್ ಹಕ್ಕು ಗಳ ಮೂಲಕ ಚಿತ್ರ ಬಿಡುಗಡೆಗೂ ಮುನ್ನ 300 ಕೋಟಿಯಷ್ಟು ದೊಡ್ಡ ಮೊತ್ತವನ್ನುಗಳಿಸಿದೆ.

ಸುಜಿತ್ ನಿರ್ದೇಶನದಲ್ಲಿ ಯುವಿ ಕ್ರಿಯೇಷನ್ ಹಾಗೂ ಟಿ-ಸಿರೀಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಾಹೋ ಚಿತ್ರದಲ್ಲಿ ಪ್ರಭಾಸ್, ಶ್ರದ್ಧಾ ಕಪೂರ್ , ಜಾಕಿ ಶ್ರಾಫ್, ನೀಲ್ ನಿತಿನ್ ಮುಕೇಶ್, ಅರುಣ್ ವಿಜಯ್. ಚಾಂಕಿ ಪಾಂಡೆ ,ಮಂದಿರಾ ಬೇಡಿ ಹಾಗೂ ಇತರ ಪ್ರಮುಖ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ತುಣುಕು ಬಿಡುಗಡೆಯಾಗಿದ್ದು ಪ್ರೇಕ್ಷಕರ ಮನಮೆಚ್ಚುಗೆಗಳಿಸಿದೆ.

ಸದ್ಯ ಸಾಹೋ ಚಿತ್ರ ತಂಡ ಪ್ರಮೋಷನ್ ಹಾಗೂ ಪ್ರೂಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು ಇದೇ ತಿಂಗಳ ಆಗಸ್ಟ್ 30 ರಂದು ವಿಶ್ವದಾದ್ಯಂತ ಮೂರು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next