Advertisement

ಚಂದ್ರಹಾಸ ಸುವರ್ಣರ ಗಗ್ಗರ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

04:47 PM Jul 08, 2018 | Team Udayavani |

ಮುಂಬಯಿ: ಪರಮಪೂಜ್ಯ ಶ್ರೀ ಗುರುದೇವಾ ನಂದ ಸ್ವಾಮೀಜಿ ಅವರ ಆಶೀರ್ವಚ ನದೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದ ಸಿರಿಚಾವಡಿಯಲ್ಲಿ ಜೂ. 30 ರಂದು ಅಪರಾಹ್ನ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಧಾನ ಹಾಗೂ ಕೃತಿ ಬಹುಮಾನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜರಗಿತು.

Advertisement

ಈ ಸಮಾರಂಭದಲ್ಲಿ ಕಥಾ ವಿಭಾಗದಲ್ಲಿ 2017ರ ಕೃತಿ ಬಹುಮಾನಕ್ಕೆ ಆಯ್ಕೆಯಾಗಿರುವ ಗಗ್ಗರ ಕೃತಿಕರ್ತ ಕವಿ, ಸಾಹಿತಿ, ನಾಟಕಗಾರ ಶಿಮಂತೂರು ಚಂದ್ರಹಾಸ ಸುವರ್ಣರನ್ನು ಅಕಾಡೆಮಿಯ ಅಧ್ಯಕ್ಷರಾದ ಎ. ಸಿ. ಭಂಡಾರಿ, ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ಹಾಗೂ  ಸರ್ವ ಸದಸ್ಯರುಗಳ ಉಪಸ್ಥಿತಿಯಲ್ಲಿ ಮಂಗಳೂರಿನ ಮಹಾನಗರ ಪಾಲಿಕೆಯ ಮಹಾಪೌರರಾದ ಕೆ. ಭಾಸ್ಕರ ಮತ್ತು ಮಹಾನಗರ ಪಾಲಿಕೆಯ ತೆರಿಗೆ ನಿರ್ಧರಣೆ ವಿಭಾಗದ ಅಧ್ಯಕ್ಷ ಶ್ರೀರಾಧಾಕೃಷ್ಣ, ಶಾಸಕ ಕೆ. ಹರೀಶ್‌ ಕುಮಾರ್‌ ಇವರ ಉಪಸ್ಥಿತಿಯಲ್ಲಿ ಗಣ್ಯಾಥಿ-ಗಣ್ಯರು, ಸಾಹಿತಿಗಳ ಸಮ್ಮುಖದಲ್ಲಿ ಕೃತಿಗೌರವ ಪ್ರಶಸ್ತಿ ನೀಡಿ ಸಮ್ಮಾನಿಸಿದರು.

ಕೃತಿಗೌರವ ಸ್ವೀಕರಿಸಿದ ಶಿಮಂತೂರು ಅವರು ಎಲ್ಲರಿಗೂ ಗೌರವ ಆದರಪೂರ್ವಕವಾಗಿ ನಮನ ಸಲ್ಲಿಸಿ, ಈ ಪ್ರಶಸ್ತಿ ತನ್ನ ಜನ್ಮಭೂಮಿ ಶಿಮಂತೂರಿನ ಸಿರಿಮಣ್ಣಿಗೆ ಹಾಗೂ ಕರ್ಮಭೂಮಿ ಮುಂಬಯಿಗೆ ಅರ್ಪಿಸುತ್ತೇನೆ. ನಮ್ಮ ಹುಟ್ಟೂರಿನ ಯಾವುದೆ ದೇವಸ್ಥಾನ-ದೈವಸ್ಥಾನಗಳ ಜೀರ್ಣೋದ್ಧಾರ ಆಗುವಾಗ ಮುಂಬಯಿ ತುಳುವರ ನೆನಪು ಊರಿನವರಿಗೆ ಆಗುತ್ತದೆ. ಆದರೆ ಅಕಾಡೆಮಿಗೆ ಸದಸ್ಯರನ್ನು ಆಯ್ಕೆ ಮಾಡುವಾಗ ಮುಂಬಯಿ ತುಳುವರನ್ನು, ಕವಿ, ಸಾಹಿತಿಗಳನ್ನು ಊರವರು ಮರೆತು ಬಿಡುತ್ತಾರೆ. ಇನ್ನು ಮುಂದಕ್ಕೆ ಆ ರೀತಿ ಆಗಬಾರದು. ಮುಂಬಯಿ ತುಳುವರಿಗೆ, ಕವಿ-ಸಾಹಿತಿಗಳಿಗೆ ಪ್ರಾತಿನಿಧ್ಯ ನೀಡಿ ಸಾಹಿತ್ಯ ಸೇವೆ ಮಾಡುವ ಅವಕಾಶ ಒದಗಿಸಬೇಕು ಎಂದು ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next