ಬೀದರ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕಳೆದೆರಡು ವರ್ಷಗಳಿಂದ ಆರಂಭಿಸಿರುವ ಸಾಹಿತಿ ಮತ್ತು ಕಲಾವಿದರ ಮನೆಗಳಿಗೆ ಭೇಟಿ ನೀಡುವ “ಸಾಹಿತ್ಯ ಸಂಗಮ’ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ವರ್ಷವೂನಗರದ 23ಕ್ಕೂ ಹೆಚ್ಚು ಸಾಹಿತಿಗಳು, ಗಾಯಕರು ಮತ್ತು ಕಲಾವಿದರ ಮನೆಗಳಿಗೆ ಭೇಟಿ ನೀಡಿ, ಪುಸ್ತಕ ಕಾಣಿಕೆಯಾಗಿನೀಡಿ ಗೌರವಿಸಿದರು. ಜತೆಗೆ ಸಾಹಿತ್ಯ ಸಿರಿ ಪುರಸ್ಕಾರ ಪ್ರದಾನ ಮಾಡಿದರು.
ಸಚಿವರನ್ನು ತಮ್ಮ ಮನೆಗಳಿಗೆ ಪ್ರೀತಿಯಿಂದ ಬರಮಾಡಿಕೊಂಡ ಎಲ್ಲ ಸಾಹಿತಿಗಳು ಮತ್ತು ಕಲಾವಿದರುಕೂಡ ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಚಿವರು ನಮ್ಮ ಮನೆಗೆ ಬಂದದ್ದು ಖುಷಿತಂದಿದೆ. ಬರೆಯಲು, ಕಲಾಕ್ಷೇತ್ರದಲ್ಲಿ ದುಡಿಯಲು ಸ್ಫೂರ್ತಿ ನೀಡಿದೆ ಎಂದು ಸಾಧಕರು ಪ್ರತಿಕ್ರಿಯಿಸಿದರು.
ಈ ವೇಳೆ ಮಾತನಾಡಿದ ಸಚಿವರು, ತಮಗೆ ಕನ್ನಡ ಎಂದರೆತುಂಬ ಪ್ರೀತಿ. ಮೊದಲಿಗಿಂತ ಈಗ ನಿರರ್ಗಳವಾಗಿ ಕನ್ನಡಮಾತಾಡುತ್ತೇನೆ. ಕನ್ನಡ ಎಂದರೆ ಅದು ಭಾಷೆಯಲ್ಲಿ ಅದುನಮಗೆ ತಾಯಿ ಇದ್ದಂತೆ. ಸತತ ಮೂರನೇ ವರ್ಷವೂ ಇಲ್ಲಿನಸಾಹಿತಿಗಳ ಮತ್ತು ಕಲಾವಿದರ ಮನೆಗೆ ಭೇಟಿ ನೀಡಿ ಅವರಿಗೆಗೌರವಿಸುವ ಅವಕಾಶ ತಮಗೆ ಸಿಕ್ಕಿರುವುದು ತಮ್ಮ ಪೂರ್ವಜನ್ಮದಪುಣ್ಯ. ಸಾಹಿತಿಗಳು ಮತ್ತು ಕಲಾವಿದರ ಮನೋಬಲ ಹೆಚ್ಚಿಸಲು ಸಾಹಿತ್ಯ ಸಂಗಮ ಕಾರ್ಯಕ್ರಮ ರೂಪಿಸಿದ್ದು, ನಿರಂತರಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದರು. ಐತಿಹಾಸಿಕ ಕಾರ್ಯಕ್ರಮ: ಕಸಾಪ ಮಾಜಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಸಂಪುಟ ದರ್ಜೆಯ ಸಚಿವರು ಸಾಹಿತಿಗಳಮನೆಗೆ ಭೇಟಿ ನೀಡಿ ಗೌರವಿಸುತ್ತಿರುವುದು ಐತಿಹಾಸಿಕವಾದದ್ದು.ಜಿಲ್ಲೆಯಲ್ಲಿ ಕನ್ನಡ ಭವನ ತಲೆ ಎತ್ತಲು ಸಚಿವ ಚವ್ಹಾಣ ಅವರೇ ಕಾರಣ ಎಂದು ತಿಳಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು.
ಪ್ರೋತ್ಸಾಹ ಧನ: ಸಾಹಿತ್ಯ ಸಂಗಮ ಕಾರ್ಯಕ್ರಮದಡಿ ಸಚಿವರು, ಬೀದರನ ಹಿರಿಯ ಚಿತ್ರಕಲಾವಿದ ಸಿ.ಬಿ. ಸೋಮಶೆಟ್ಟೆ ಮನೆಗೆ ಭೇಟಿ ನೀಡಿದಾಗ ಅವರ ಪೇಂಟಿಂಗ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗಾಯಕಿ ಭಾನುಪ್ರಿಯಾ ಅರಳಿ ಮನೆಗೆ ಭೇಟಿ ನೀಡಿದಾಗ ಯುಕ್ತಿ ಅರಳಿ ಬಾಲಕಿಯಿಂದ ರಾಜ್ಯೋತ್ಸವ ಭಾಷಣಕೇಳಿ ಸಚಿವರು ವಿಸ್ಮಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಸೋಮಶೆಟ್ಟೆ ಅವರಿಗೆ ಮತ್ತು ಯುಕ್ತಿ ಅರಳಿ ಅವರಿಗೆ ಸಹಾಯಧನ ಮತ್ತು ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.
ಈ ವೇಳೆ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಶಿವಕುಮಾರ ಕಟ್ಟೆ, ರಮೇಶ ಬಿರಾದಾರ,ಶಂಭುಲಿಂಗ ವಾಲದೊಡ್ಡಿ, ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ,ಸಿದ್ಧಾರೂಢ ಭಾಲ್ಕೆ, ದೇವೇಂದ್ರ ಕರಂಜೆ, ವಿಜಯಕುಮಾರಗೌರೆ, ಪ್ರೊ| ಜಗನ್ನಾಥ ಕಮಲಾಪೂರೆ, ಆನಂದ ಪಾಟೀಲ,ಅಶೋಕ ದಿಡಗೆ, ಗುರುಮೂರ್ತಿ ಇತರರಿದ್ದರು.
ಪುಸ್ತಕ ಕಾಣಿಕೆ-ಪ್ರಶಸ್ತಿ :
ಗಾಯಕಿ ರೇಖಾ ಸೌದಿ, ಸಾಹಿತಿ/ ಕಲಾವಿದರಾದ ಎಂ.ಎಸ್. ಮನೋಹರ, ರೂಪಾ ಪಾಟೀಲ, ಉಷಾಪ್ರಭಾಕರ, ಚೆನ್ನಮ್ಮ ಮತ್ತು ಹಂಸಕವಿ (ಹನುಮಂತಪ್ಪ ವಲ್ಲೇಪೂರೆ), ವಿದ್ಯಾವತಿ ಬಲ್ಲೂರ- ಬಸವರಾಜ ಬಲ್ಲೂರ, ಡಾ| ಚಂದ್ರಪ್ಪ ಭತಮುರ್ಗೆ, ಸಂಗಮೇಶ ಜ್ಯಾಂತೆ, ರಾಣಿ ಸತ್ಯಮೂರ್ತಿ, ಕಸ್ತೂರಿ ಪಟಪಳ್ಳಿ, ಸಿ.ಬಿ. ಸೋಮಶೆಟ್ಟಿ, ಭಾರತಿ ವಸ್ತ್ರದ, ಶೈಲಜಾ ಹುಡಗೆ, ಚೆನ್ನಬಸವ ಹೆಡೆ, ಶಿವಲಿಂಗ ಹೆಡೆ, ಮಹೇಶ್ವರಿ ಹೆಡೆ, ಜಯದೇವಿ ಯದಲಾಪೂರೆ, ವಿಜಯಲಕೀÒ$¾ಕೌಟಗೆ,ಪಾರ್ವತಿ ಸೋನಾರೆ- ವಿಜಯಕುಮಾರ ಸೋನಾರೆ, ಭಾನುಪ್ರಿಯಾ ಅರಳಿ ಮನೆಗಳಿಗೆ ತೆರಳಿ ಸಚಿವರು ಪುಸ್ತಕ ಕಾಣಿಕೆಯಾಗಿ ನೀಡಿ, ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು.