ನವದೆಹಲಿ: ಪ್ರೇಯಸಿ ನಿಕ್ಕಿ ಯಾದವ್‌ಳನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸಾಹಿಲ್ ಗೆಹ್ಲೋಟ್ ಇಬ್ಬರ ಮೊಬೈಲ್‌ಗಳಲ್ಲಿರುವ ಎಲ್ಲಾ ಡೇಟಾ ಅನ್ನು ಅಳಿಸಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇಬ್ಬರ ನಡುವಿನ ಫೋನ್ ಕರೆಗಳು, ಮೆಸೇಜ್‌ಗಳು, ಫೋಟೋಗಳು ಸೇರಿದಂತೆ ಎಲ್ಲ ವಿವರಗಳನ್ನು ಮುಚ್ಚಿಡಲು ಆರೋಪಿ ಯತ್ನಿಸಿದ್ದಾನೆ. ನಾವು ಡೇಟಾ ರಿಕವರಿಗಾಗಿ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ,’ ಎಂದು ಅಪರಾಧ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ವಿಚಾರಣೆ ವೇಳೆ, ಸಾಹಿಲ್ ನಿಕ್ಕಿಯನ್ನು ಮದುವೆಯಾಗಲು ಇಚ್ಛಿಸಿದ್ದ. ಆದರೆ, ಕುಟುಂಬ ಸದಸ್ಯರು ಬೇರೆ ಯುವತಿ ಜತೆಗೆ ನಿಶ್ಚಿತಾರ್ಥ ನಡೆಸಿ ಮದುವೆ ಗೊತ್ತು ಮಾಡಿದ್ದರು ಎಂದು ತಿಳಿಸಿದ್ದಾನೆ ಎಂದು ಯಾದವ್ ಹೇಳಿದ್ದಾರೆ. ಫೆ.9ರಂದು ನಡೆದಿದ್ದ ನಿಶ್ಚಿತಾರ್ಥದಲ್ಲಿ ಆತ ಸಂಬಂಧಿಕರೊಂದಿಗೆ ನೃತ್ಯ ಮಾಡಿದ್ದಾನೆ ಎಂದು ಗೊತ್ತಾಗಿದೆ. ಇದೇ ವೇಳೆ ಅವರಿಬ್ಬರು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಅಂಶವೂ ಬೆಳಕಿಗೆ ಬಂದಿದೆ.
ಕಾಶ್ಮೀರಿ ಗೇಟ್‌ನಲ್ಲಿ ಪರಿಶೀಲನೆ:
ಈ ನಡುವೆ ಪೊಲೀಸರು ಕಾಶ್ಮೀರಿ ಗೇಟ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಾಹಿಲ್ ಗೆಹೊÉàಟ್‌ನ ಸಹೋದರನನ್ನೂ ವಿಚಾರಣೆ ನಡೆಸಲಾಗಿದೆ. ನಿಜಾಮುದ್ದೀನ್ ಮತ್ತು ಆನಂದ ವಿಹಾರ್ ರೈಲ್ವೇ ನಿಲ್ದಾಣದಲ್ಲೂ ಪರಿಶೀಲನೆ ನಡೆಸಲಾಗಿದೆ. ನಿಕ್ಕಿ ಹತ್ಯೆಯ ವಿಚಾರಣೆಯನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕೆಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.