Advertisement
ಉಜಿರೆಯ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ ಸಹನಾ, ಸದ್ಯ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ. ಈ ವರೆಗಿನ ಎಲ್ಲ ಪ್ರಮುಖ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲೇ ತೇರ್ಗಡೆಯಾಗಿರುವ ಅವರು ಕಲಿಕೆಯೊಂದಿಗೆ ನೃತ್ಯ, ಚಿತ್ರಕಲೆ, ಸಂಗೀತ ಇತ್ಯಾದಿಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಯಾವುದೇ ವಿಷಯವನ್ನು ಕಲಿಯಲು, ತನ್ನದಾಗಿಸಿಕೊಳ್ಳಲು ಆಸಕ್ತಿ, ಅಭ್ಯಾಸ ಇದ್ದರೆ ಸಾಕು ಎಂಬುದನ್ನು ಸಾಬೀತು ಮಾಡಿದ್ದಾರೆ.
Related Articles
ಚಿತ್ರಕಲೆಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಅವರು, ವಿಶ್ವ ಗ್ರಾಹಕ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಶ್ರೀ ರವಿವರ್ಮ ಅಕಾಡೆಮಿ ಟ್ರಸ್ಟ್ ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಉತ್ತಮ ಛಾಯಾಗ್ರಾಹಕಿಯೂ ಆಗಿರುವ ಅವರು, ಎಸ್.ಆರ್. ಫೋಟೋಗ್ರಾಫಿಯನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ.
Advertisement
ಇದರೊಂದಿಗೆ ನಟನೆ, ಡಬ್‌ಸ್ಮಾಷ್ ಕಲೆಗಳನ್ನೂ ಕಲಿತಿದ್ದಾರೆ. ನಾಯಕತ್ವ ಗುಣ ಬೆಳೆಸಿಕೊಂಡಿದ್ದು, ಯಾವುದೇ ಸನ್ನಿವೇಶವನ್ನು ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸವಿದೆ. ವಾಹನ ಚಾಲನೆ, ಸೈಕ್ಲಿಂಗ್, ನಾಣ್ಯ ಹಾಗೂ ಅಂಚೆ ಚೀಟಿ ಸಂಗ್ರಹ, ರೇಡಿಯೋ ಕೇಳುವುದು ಇತ್ಯಾದಿ ಹವ್ಯಾಸಗಳನ್ನು ಇಷ್ಟಪಟ್ಟು ಬೆಳೆಸಿಕೊಂಡಿದ್ದಾರೆ.ಲಿಖಿತಾ ಗುಡ್ಡೆಮನೆ
ಉದಯವಾಣಿ ವಿದ್ಯಾರ್ಥಿ
ಪತ್ರಕರ್ತ ಯೋಜನೆಯ ಶಿಕ್ಷಣಾರ್ಥಿ