Advertisement

ಬೀದಿ ದೀಪ ಇಲ್ಲದ್ದೇ ಕಳ್ಳರಿಗೆ ದಾರಿದೀಪ!

03:54 PM Aug 19, 2019 | Naveen |

ಸಾಗರ: ನಗರ ವ್ಯಾಪ್ತಿ ಬೀದಿದೀಪಗಳ ನಿರ್ವಹಣೆಯ ನಿರ್ಲಕ್ಷ್ಯಕ್ಕೆ ಆಶ್ಲೇಷಾ ಮಳೆಯ ಅಬ್ಬರವೂ ಕಾರಣವಾಗಿ ನಗರದ ಹಲವು ಭಾಗಗಳು ರಾತ್ರಿ ವೇಳೆ ಬೀದಿ ದೀಪಗಳು ಬೆಳಗದೆ ಕತ್ತಲೆ ಆವರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕತ್ತಲೆಯ ಅನುಭವಾದರೂ ಕಳ್ಳರಿಗೆ ಇದೇ ಬದುಕಿನ ದಾರಿಯಾಗಿ ವಿವಿಧೆಡೆ ಸರಣಿ ಕಳ್ಳತನಗಳಾಗುತ್ತಿವೆ.

Advertisement

ಅಣಲೆಕೊಪ್ಪ, ಕಾಗೋಡು ತಿಮ್ಮಪ್ಪ ಬಡಾವಣೆ, ಜನ್ನತ್‌ಗಲ್ಲಿ, ಎಸ್‌ಎನ್‌ ನಗರ ವ್ಯಾಪ್ತಿಗಳಲ್ಲಿ ಹಲವು ಪ್ರಕರಣಗಳು ನಡೆದಿವೆ. ನಗರದ 5ನೇ ವಾರ್ಡ್‌ನ ಅಣಲೆಕೊಪ್ಪ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಒಳಗಿನ ವಸ್ತುಗಳನ್ನು ಕದಿಯಲಾಗಿದೆ.

ಹತ್ತು ದಿನಗಳ ಅವಧಿಯಲ್ಲಿ 400ಕ್ಕೂ ಹೆಚ್ಚು ಬೀದಿ ದೀಪಗಳ ಸಮಸ್ಯೆಯ ದೂರು ದಾಖಲಾಗಿದೆ. ದುರಸ್ತಿಗೆ ಒಂದೇ ವಾಹನ ಇರುವುದರಿಂದ ಮತ್ತೂಂದು ವಾಹನ ಒದಗಿಸಿಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸೋಮವಾರದಿಂದ 2 ವಾಹನ ಬಳಸಿ ದುರಸ್ತಿ ಕಾರ್ಯ ಮಾಡಲಾಗುವುದು. ಅತಿಯಾದ ಮಳೆಯಿಂದ ಆಗಿರುವ ಪರಿಣಾಮದ ಪರಿಶೀಲನೆ ದೊಡ್ಡ ಸವಾಲಾಗಿದೆ. ಯಾವ ಸಮಸ್ಯೆ ಎಂದು ಹುಡುಕುವುದು ಬಹಳ ಸಮಯ ತೆಗೆದುಕೊಳ್ಳುತ್ತಲಿದೆ ಎಂದು ನಗರಸಭೆಯ ಇಂಜಿನಿಯರ್‌ ವಿಠuಲ ಹೆಗಡೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಈಚೆಗೆ ಆಯ್ಕೆಯಾದ ನಗರಸಭಾ ಸದಸ್ಯರು ಇನ್ನೂ ಅಧಿಕೃತ ಅಧಿಕಾರ ವಹಿಸಿಕೊಳ್ಳದಿದ್ದರೂ ವಾರ್ಡ್‌ ವ್ಯಾಪ್ತಿಯ ಜನಗಳಿಂದ ಬೈಸಿಕೊಳ್ಳುವಂತಾಗಿದೆ. ಕೆಲವು ವಾರ್ಡ್‌ ವಾಸಿಗಳು ತಮ್ಮ ಹೊಸ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಗರದ ಅದೃಷ್ಟಕ್ಕೆ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಆರೋಪ ಹೊರಿಸುತ್ತಿದ್ದು, ವಾರ್ಡ್‌ ಸದಸ್ಯರು ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಖುದ್ದು ತಾವೇ ಆ ಕೆಲಸ ಮಾಡಿಸಿ, ಬೀದಿ ದೀಪ ಸಮಸ್ಯೆ ಮುಕ್ತ ವಾರ್ಡ್‌ ರೂಪಿಸುವ ಪಣ ತೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next