ಸಾಗರ: ಜಿಲ್ಲಾ ಮಲೆನಾಡು ರೈತ ಹೋರಾಟ ಸಮಿತಿವತಿಯಿಂದ ಬಗರ್‌ಹುಕುಂ ಸಾಗುವಳಿದಾರರಿಗೆಮತ್ತು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರನೀಡುವಂತೆ ಒತ್ತಾಯಿಸಿ, “ಹಕ್ಕುಪತ್ರ ಕೊಡಿಸಿ,ಭೂ ಹಕ್ಕು ದೊರಕಿಸಿ ಇಲ್ಲವೇ ಸಂಸದರು ಮತ್ತುಶಾಸಕರು ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಸಾಗರದ ಗಾಂ ಧಿ ಮೈದಾನದಿಂದ ಹೊರಟಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿ ಕಾರಿಗಳಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಗಾಂಧಿ ಮೈದಾನದಲ್ಲಿ ನಡೆದಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿಯಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಶರಾವತಿಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಸಂಬಂಧ ಮುಖ್ಯಮಂತ್ರಿಗಳು, ನಿಕಟಪೂರ್ವಮುಖ್ಯಮಂತ್ರಿಗಳು, ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹಾಲಪ್ಪ ಇನ್ನಿತರರ ನೇತೃತ್ವದಲ್ಲಿಬೆಂಗಳೂರಿನಲ್ಲಿ ಸಭೆ ನಡೆದು ಇಂದಿಗೆ ಸರಿಯಾಗಿಆರು ತಿಂಗಳಾಯಿತು. ಈತನಕ ಸಭೆಯ ನಡಾವಳಿಬರೆದಿಲ್ಲ. ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರು,ಸಂಸದರಿಗೆ ಮುಳುಗಡೆ ಸಂತ್ರಸ್ತರ ಬಗ್ಗೆ ಕಾಳಜಿಇಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಸಭೆಯ ಗತಿಯೇ ಹೀಗಾದರೆ ಉಳಿದ ಸಚಿವರಪಾಡೇನು ಎಂದು ಪ್ರಶ್ನಿಸಿದರು.
ತಾವು ಮುಳುಗಡೆಸಂತ್ರಸ್ತರು ಎಂದು ಹೇಳಿಕೊಳ್ಳುವ ಶಾಸಕ ಹಾಲಪ್ಪಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ 48 ಸಾವಿರಕ್ಕೂ ಹೆಚ್ಚು ಅರಣ್ಯ ಹಕ್ಕುಸಾಗುವಳಿದಾರರ ಅರ್ಜಿ ವಜಾಗೊಳಿಸಲಾಗಿದೆ.ರೈತರು ಜಿಲ್ಲಾ ಧಿಕಾರಿಗಳ ಕಚೇರಿಗೆ ಅಲೆದಾಡುವಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಉಪವಿಭಾಗಾಧಿಕಾರಿಗಳು ಮಾಡಿದ್ದಾರೆ. ತಕ್ಷಣ ಸರ್ಕಾರಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರನೀಡಬೇಕು.
ವರಾಹಿ, ಚಕ್ರಾ, ಸಾವೆಹಕ್ಲು ವಿದ್ಯುತ್‌ಯೋಜನೆಗೆ ಭೂಮಿ ಕಳೆದುಕೊಂಡವರ ಸಮಸ್ಯೆಬಗೆಹರಿಸಬೇಕು. ಇಲ್ಲವಾದಲ್ಲಿ ರೈತರು ಕಾನೂನುಭಂಗ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳುವುದುಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆನೀಡಿದರು.ಪ್ರತಿಭಟನೆಯಲ್ಲಿ ದಿನೇಶ್ ಶಿರವಾಳ, ಹೊಯ್ಸಳಗಣಪತಿಯಪ್ಪ, ರಮೇಶ್ ಕೆಳದಿ, ಧರ್ಮರಾಜ್‌ಶಿರವಾಳ, ರಮೇಶ್ ಐಗಿನಬೈಲು, ಅಬ್ದುಲ್‌ಅಜೀಜ್, ಹನುಮಂತಪ್ಪ, ರಾಜು ದೇವಾಡಿಗ,ಷಣ್ಮುಖ, ಶಿವಕುಮಾರ್, ಪರಶುರಾಮ್ ಸಿಡ್ಡಿಹಳ್ಳಿ,ಕೆ.ಲಕ್ಷ ¾ಣಪ್ಪ, ಕಲ್ಲಪ್ಪ, ಶ್ರೀಕಾಂತ್ ನಾಯ್ಕ,ಶ್ರೀಧರಮೂರ್ತಿ ಇನ್ನಿತರರಿದ್ದರು.