ಸಾಗರ: ತಾಲೂಕಿನ ಕೆಳದಿ ಗ್ರಾಪಂನಲ್ಲಿ 80ವರ್ಷಕ್ಕೂ ಹೆಚ್ಚಿನ ವಯೋಮಾನದ ಕಟ್ಟಡದಲ್ಲಿಅತ್ಯಾಧುನಿಕವಾದ ಡಿಜಿಟಲ್ ಲೈಬ್ರರಿಯೊಂದುಆರಂಭಗೊಳ್ಳಲು ಅಣಿಯಾಗುತ್ತಿದೆ. ಹಳೆಯದು, ಹೊಸದರ ಸಮ್ಮಿಲನ ಇದಾಗಲಿದ್ದುನವನವೀನ ಭರವಸೆಗಳನ್ನು ಮೂಡಿಸಿದೆ.1940ರಲ್ಲಿ ಉದ್ಘಾಟನೆಯಾದಐತಿಹಾಸಿಕ ಕಟ್ಟಡವನ್ನು ರಾಜ್ಯ ಸರಕಾರದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿಕ್ರಾಂತಿಯ ಭಾಗವಾಗಿ ಅಣಿಗೊಳಿಸಲಾಗುತ್ತಿದೆ.
ಕಳೆದ ಕೆಲವು ವರ್ಷಗಳವರೆಗೆ ಈಕಟ್ಟಡವನ್ನು ಗ್ರಾಪಂ ಕಚೇರಿಯಾಗಿ ಬಳಕೆಮಾಡಲಾಗುತ್ತಿತ್ತು. ಹಳೆಯ ಕಟ್ಟಡಕ್ಕೆ ಅಗತ್ಯದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಶೀಘ್ರವಾಗಿಐತಿಹಾಸಿಕ ಕಟ್ಟಡ ಡಿಜಿಟಲ್ ಲೈಬ್ರರಿಯಾಗಿಓದಿನ ಹವ್ಯಾಸ ಬೆಳೆಸುವ ಜ್ಞಾನ ದೇಗುಲವಾಗಿ ಬಳಕೆಯಾಗಲಿದೆ.
ರಾಜ್ಯ ಸರಕಾರ 1,885 ಡಿಜಿಟಲ್‌ಗ್ರಂಥಾಲಯಗಳ ಸ್ಥಾಪನೆ ಮೂಲಕ ಗ್ರಾಮಮಟ್ಟದಲ್ಲಿ ಓದಿನ ಪ್ರೋತ್ಸಾಹ ನೀಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲುಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷಿಯೋಜನೆ ರೂಪಿಸಿದೆ. ಈಗಾಗಲೇ ಬೆಂಗಳೂರಿನರಾಜನಕುಂಟೆ ಮತ್ತು ಬೆಳಗಾವಿಯ ಬೀಡ್‌ಗ್ರಾಮದ ಡಿಜಿಟಲ್ ಮತ್ತು ಪುಸ್ತಕ ಗ್ರಂಥಾಲಯರಾಜ್ಯದ ಗಮನ ಸೆಳೆದಿದೆ.ಅಂದಿನ ಮೈಸೂರು ಆಳ್ವಿಕೆಯಕಂದಾಯ ಕಮಿಷನರ್ ಅಬ್ದುಲ್ ವಾಜಿದ್‌ಈ ಕಟ್ಟಡವನ್ನು 1940ರ ನ. 1ರಂದುಲೋಕಾರ್ಪಣೆ ಮಾಡಿದ್ದಾರೆ.
ಬೆಲೆಬಾಳುವಸಾಗವಾನಿ ತೊಲೆಗಳಿರುವ ಕಟ್ಟಡದಲ್ಲಿ ಅಗತ್ಯದುರಸ್ತಿ ಕಾರ್ಯವನ್ನು ಗ್ರಾಪಂ ಆರಂಭಿಸಿದೆ.ಗೋಡೆ ಬರಹಗಳಿಂದ ಸಜ್ಜುಗೊಳಿಸಿದೆ.ಪೀಠೊಪಕರಣ ಅಳವಡಿಕೆ, ಪುಸ್ತಕ ಜೋಳಿಗೆಅಭಿಯಾನದ ಮೂಲಕ ಸ್ಥಳೀಯವಾಗಿದಾನಿಗಳ ನೆರವನ್ನು ಗ್ರಾಪಂ ಅಪೇಕ್ಷಿಸಿದೆ. 2ಕಂಪ್ಯೂಟರ್ ಒದಗಿಸಲಾಗಿದೆ. 2 ಕೋಣೆಗಳನ್ನುರೀಡಿಂಗ್ ರೂಂ ಆಗಿ ಅಣಿಗೊಳಿಸಲಾಗುತ್ತಿದೆ.ಪುಸ್ತಕ ಜೋಳಿಗೆ ಅಭಿಯಾನಕ್ಕೆ ದಾನಿಗಳುಸ್ಪಂದಿಸುತ್ತಿದ್ದಾರೆ.
ತಾಂತ್ರಿಕ ಹಾಗೂ ಆಡಳಿತಾತ್ಮಕವ್ಯವಸ್ಥೆಗಳನ್ನು ಶೀಘ್ರ ಕಲ್ಪಿಸಲು ಭರದಿಂತ ಕೆಲಸನಡೆಯುತ್ತಿದೆ. ಚೆನ್ನಮ್ಮಾಜಿ ಜಯಂತಿ ಅಥವಾಕೆಳದಿ ಉತ್ಸವದ ಸಂಭ್ರಮಾಚರಣೆ ಸಂದರ್ಭಡಿಜಿಟಲ್ ಗ್ರಂಥಾಲಯದ ಲೋಕಾರ್ಪಣೆಗೆಗ್ರಾಪಂ ಸಿದ್ಧತೆ ನಡೆಸುತ್ತಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಡಿಜಿಟಲ್ ಲೈಬ್ರರಿಕ್ರಾಂತಿಯ ಭಾಗವಾದ ಯೋಜನೆಯಲ್ಲಿರಾಷ್ಟ್ರೀಯ ಡಿಜಿಟಲ್ ಲೈಬ್ರರಿಯ ಜತೆಗೆ ಲಿಂಕ್‌ಸೌಲಭ್ಯದಿಂದಾಗಿ 8 ಕೋಟಿ ಪುಸ್ತಕಗಳು ಗ್ರಾಮಮಟ್ಟದಲ್ಲಿ ಆಸಕ್ತರಿಗೆ ದೊರಕಲಿವೆ. ರಾಜ್ಯ ಪಠ್ಯಪುಸ್ತಕ ಸೊಸೈಟಿ ಪ್ರಕಟಿಸುವ ಎಲ್ಲಾ ತರಗತಿಯಪಠ್ಯಪುಸ್ತಕಗಳನ್ನು ಸಹ ಮಲೆನಾಡಿನ ಹಳ್ಳಿಯಲ್ಲಿಕುಳಿತು ಅವಲೋಕಿಸಬಹುದಾಗಿದೆ.